ನಾಳೆ ನೀರಿನ ಶುದ್ಧೀಕರಣ ಘಟಕಕ್ಕೆ ಶಾಸಕ ಡಿ.ರವಿಶಂಕರ್ ಚಾಲನೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ.30:- ಕಳೆದ ಮೇ ತಿಂಗಳಲ್ಲಿ ಸುರಿದ ಮಳೆಗೆ ಕಾವೇರಿ ನದಿಯಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಹರಿದು ಬರಲಾಗಿ ಪಂಪ್ ಹೌಸ್ ನ ಶುದ್ದೀಕರಣದ ಫಿಲ್ಟರ್ ದುರಸ್ತಿಯಾಗದೇ ಪಟ್ಟಣಕ್ಕೆ ಕೆಂಪುಬಣ್ಣದ ನೀರನ್ನೇ ಪುರಸಭೆ ಸರಬರಾಜು ಮಾಡಲಾಗುತ್ತಿತ್ತು,ಶಾಸಕರು, ಪುರಸಭೆ ಸದಸ್ಯರು, ಆಡಳಿತ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಲಾಗಿತ್ತು.
ಕೂಡಲೇ ಎಚ್ಚತ್ತ ಪುರಸಭೆಯ ಆಡಳಿತ ಅಧಿಕಾರಿಯಾಗಿರುವ ಹುಣಸೂರಿನ ಉಪ ವಿಭಾಗಾಧಿಕಾರಿ ಹಾಗೂ ಮುಖ್ಯಾಧಿಕಾರಿ
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಫಿಲ್ಟರ್ ಘಟಕ ಸಂಪೂರ್ಣವಾಗಿ ದುರಸ್ತಿಯಾಗುತ್ತಿದ್ದು. ಶುದ್ದೀಕರಣದ ಕಾಮಗಾರಿಗೆ ರೂ. 33 ಲಕ್ಷ ವೆಚ್ಚದಲ್ಲಿ ಘಟಕವನ್ನು ಸಂಪೂರ್ಣವಾಗಿ ದುರಸ್ತಿಯಾಗಿದ್ದು ಜುಲೈ 1ಕ್ಕೆ ಪೂಜಾ ಕಾರ್ಯ ಕೈಗೊಂಡು ಶಾಸಕ ಡಿ.ರವಿಶಂಕರ್ ಚಾಲನೆ ನೀಡಲಿದ್ದಾರೆ ಎಂದು ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ತಿಳಿಸಿದರು.