ತಾ. ಒಕ್ಕಲಿಗರ ಸಂಘದ ಚುನಾವಣೆ ಅ.27 ಅಧ್ಯಕ್ಷ ಎಂ.ಟಿ.ಅಣ್ಣೇಗೌಡ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ.30:- ತಾಲೂಕು ಒಕ್ಕಲಿಗರ ಸಂಘದ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಅಕ್ಟೋಬರ್, 27ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಈ ಸಂಬಂದ ಸಹಕಾರ ಇಲಾಖೆಯ ನಿವೃತ್ತ ಆಧಿಕಾರಿ ಪುಟ್ಟಸ್ವಾಮೇಗೌಡ ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು ಸೆಪ್ಟಂಬರ್ 22 ರಂದು ಸಂಘದ ಮಹಾಸಭೆ ನಡೆದ ನಂತರ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಈ ವರೆಗೆ ಸಂಘದ ನಿರ್ದೇಶಕ ಸ್ಥಾನಗಳ ಸಂಖ್ಯೆ 21 ಇದ್ದು ಹೋಬಳಿ ಮತ್ತು ಪಟ್ಟಣವಾರು ತಾರತಮ್ಯ ಮಾಡಲಾಗಿತ್ತು ಆದರೆ ಈಗ ಆ ಸಂಖ್ಯೆಯನ್ನು 15ಕ್ಕೆ ಇಳಿಸಿ ಆರು ಹೋಬಳಿಗೆ ತಲಾ 2 ಕೆ.ಆರ್.ನಗರ ಪಟ್ಟಣಕ್ಕೆ 2 ಮತ್ತು ಪೆÇೀಷಕರಿಗೆ 1 ಸ್ಥಾನ ನಿಗದಿಪಡಿಸಲಾಗಿದೆ ಎಂದರು.
ಇದರ ಜತೆಗೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಒಕ್ಕಲಿಗ ಸಮಾಜದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಶೇಕಡ 90% ಅಂಕ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
2023-24ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ ಶೇ, 90 ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿಯ ಜೆರಾಕ್ಸ್ ಪ್ರತಿ, ಎರಡು ಪಾಸ್ ಪೆÇೀರ್ಟ್ ಅಳತೆಯ ಬಾವಚಿತ್ರ ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಜುಲೈ.15 ರೊಳಗೆ ನೀಡಬೇಕು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಹೆಚ್.ಡಿ.ದೇವೇಗೌಡ ಸಮುದಾಯ ಭವನದ ಕಛೇರಿ ಮತ್ತು ಈ ಮೊಬೈಲ್ ಸಂಖ್ಯೆಯನ್ನು 9900888265 ಸಂಪರ್ಕಿಸ ಬೇಕೆಂದ ಸಲಹೆ ನೀಡಿದರು.
ಸಂಘದ ಹಿರಿಯ ಉಪಾಧ್ಯಕ್ಷ ಹೆಚ್.ಪಿ.ಪರಶುರಾಂ, ಪ್ರಧಾನ ಕಾರ್ಯದರ್ಶಿ ಸಿ.ಎಸ್,ರಾಮಲಿಂಗು, ಮಾಜಿ ಪ್ರ.ಕಾರ್ಯದರ್ಶಿ ಬಿ.ಅಣ್ಣಾಜಿಗೌಡ, ನಿರ್ದೇಶಕರಾದ ಎ.ಟಿ.ಸೋಮಶೇಖರ್, ಜೆ.ಎಂ.ಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.