ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಡಾ. ನಾಗಲಕ್ಷ್ಮಿ ಸೂಚನೆ
ಸಂಜೆವಾಣಿ ವಾರ್ತೆ
ಹುಮನಾಬಾದ್ :ಜೂ.30:ಸಾರ್ವಜನಿಕ ಆಸ್ಪತ್ರೆಗೆ ಆಗಮಿಸುವ ಬಡ ರೋಗಿಗಳಿಗೆ ವೈದ್ಯಾಧಿಕಾರಿಗಳು ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.
ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಅನುಕೂಲವಾಗುವಂತೆ ಇಲ್ಲಿ ತುರ್ತುನಿಕ ಘಟಕ ತೆರೆಯಲಾಗಿದೆ ನಿಮ್ಮ ನಿರ್ಲಕ್ಷದಿಂದ ರೋಗಿಗಳನ್ನು ಬೀದರ್ ನಗರಕ್ಕೆ ಕಳುಹಿಸುತ್ತಿದ್ದೀರಿ, ರೋಗಿಗಳ ಆರೋಗ್ಯ ಗುಣಮುಖ ಮಾಡುವ ನಿಟ್ಟಿನಲ್ಲಿ ಸರ್ಕಾರ ಲಕ್ಷಾಂತರ ರೂಪಾಯಿ ಅನುದಾನ ಖರ್ಚು ಮಾಡಿ ಈ ಘಟಕ ತೆರೆದಿದೆ ಹೀಗಾಗಿ ಈ ಘಟಕದ ಸದುಪಯೋಗ ಪಡೆದುಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ರೋಗಿಗಳ ಹಿತಾ ದೃಷ್ಟಿಯಿಂದ ಆಸ್ಪತ್ರೆ ಆವರಣ ವಾಡ್ರ್ಗಳು ಸಂಪೂರ್ಣ ಸ್ವಚ್ಛತೆಯಿಂದ ನೋಡಿಕೊಳ್ಳಬೇಕು ರೋಗಿಗಳಿಗೆ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಇಲ್ಲಿನ ರೋಗಿಗಳಿಗೆ ಪ್ರಾಮಾಣಿಕವಾಗಿ ನೀಡುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಹುಮನಾಬಾದ್ ಪೆÇಲೀಸ್ ಠಾಣೆಗೆ ಭೇಟಿ
ಹುಮನಾಬಾದ್ ಉಪವಲಯ ಪೆÇಲೀಸ್ ಠಾಣೆಗಳು ಆನೆಗಳು ಜನಸ್ನೇಹಿ ಪಾಣೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ತಿಳಿಸಿದರು.
ಪಟ್ಟಣದ ಪೆÇಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಕಡೆಗಳನ್ನು ಪೆÇಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದು 10 ಹಲವಾರು ಸಮಸ್ಯೆಗಳಿಗಿಂತ ಕೂಡಿರುವುದನ್ನು ಗಮನಿಸಿದ್ದೇನೆ ಆದರೆ ಇಲ್ಲಿ ಅತಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬರುತ್ತದೆ. ಬಹುತೇಕ ಪ್ರಕರಣಗಳ ಕುರಿತು ಗಮನಿಸಿದರೆ ಇಲ್ಲಿನ ಪೆÇಲೀಸ್ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬರುತ್ತದೆ
ಡಿವೈಎಸ್‍ಪಿ ಜಿ.ಎಸ್. ನ್ಯಾಮೇಗೌಡರ, ಸಿಪಿಐ ಗುರು ಪಾಟೀಲ, ಪಿಎಸ್‍ಐ ತಿಮ್ಮಯ್ಯ, ಸಂಚಾರ ಪಿಎಸ್‍ಐ ಬಸವರಾಜ, ಸಿಬ್ಬಂದಿ ವಜೀರ ಪಟೇಲ ಸೇರಿದಂತೆ ಅನೇಕರು ಇದ್ದರು