ನೇತ್ರದಾನದ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಿ : ಶಾಸಕ ಲಕ್ಷ್ಮಣ ಸವದಿ
ಅಥಣಿ :ಜೂ.30: ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅಥಣಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡದಿಂದ ಅತ್ಯುತ್ತಮ ಸೇವೆ ಮತ್ತು ಸರ್ಕಾರದ ಆರೋಗ್ಯ ಸೇವೆಗಳು ದೊರಕುತ್ತಿರುವುದು ನನಗೆ ಸಂತಸ ತಂದಿದೆ. ರಾಜ್ಯದ ಅತ್ಯುತ್ತಮ 10 ಸರ್ಕಾರಿ ಆಸ್ಪತ್ರೆಗಳ ಪಟ್ಟಿಯಲ್ಲಿ ಅಥಣಿ ಸಾರ್ವಜನಿಕ ಆಸ್ಪತ್ರೆ ಇರುವುದು ಈ ಕ್ಷೇತ್ರದ ಶಾಸಕನಾಗಿ ನನಗೆ ಹೆಮ್ಮೆ ಎನಿಸುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಸಂತಸ ವ್ಯಕ್ತಪಡಿಸಿದರು.
ಅವರು ಶನಿವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜನಹಿತ ಐಕೇರ ಸೆಂಟರ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. ತಾಲೂಕ ವೈದ್ಯಾಧಿಕಾರಿ ಡಾ. ಬಸನಗೌಡ ಕಾಗೆ ಅವರ ನೇತೃತ್ವದಲ್ಲಿ ಎಲ್ಲಾ ವೈದ್ಯರ ತಂಡ ಹಾಗೂ ಅವರ ಸಿಬ್ಬಂದಿಗಳ ಸೇವೆ ಅತ್ಯುತ್ತಮವಾಗಿ ಇರುವುದರಿಂದ ರಾಜ್ಯದಲ್ಲಿ ಉತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾಲೂಕಿನ ಬಡ ಜನತೆಗೆ ಇದೇ ರೀತಿ ತಮ್ಮ ಸೇವೆ ಮುಂದುವರಿಯಬೇಕು. ನಿಮ್ಮ ಸರ್ಕಾರದ ಸೇವೆ ನಿವೃತ್ತಿಯ ನಂತರವೂ ಕೂಡ ಜನರು ಮೆಚ್ಚುಗೆ ವ್ಯಕ್ತಪಡಿಸುವಂತಹ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಈ ಹಿಂದೆ ಆರು ತಿಂಗಳಿಗೊಮ್ಮೆ ಎರಡು ಬಾರಿ ನೇತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡು ಸು. 950 ಕ್ಕೂ ಅಧಿಕ ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೂ ಕೂಡ ಇನ್ನೂ ಮುಂದೆ ಇಲ್ಲಿ ನಿರಂತರ ಶಿಬಿರಗಳನ್ನ ಹಮ್ಮಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಶೀಘ್ರದಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ : ಪಟ್ಟಣದ ಹಳೆಯ ತಹಸೀಲ್ದಾರ್ ಕಾರ್ಯಾಲಯದ ಸ್ಥಳವನ್ನು ಕಂದಾಯ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಆಡಳಿತಾತ್ಮಕ ಮಂಜೂರಾತಿ ಕೂಡ ದೊರಕಿದ್ದು, ಶೀಘ್ರದಲ್ಲಿಯೇ 50 ಹಾಸಿಗೆಯ ಸೌಲಭ್ಯವುಳ್ಳ ತಾಯಿ ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಆರೋಗ್ಯದ ಜೊತೆಗೆ ಆಹಾರ ಸಲಹೆ ನೀಡಿ :
ಇತ್ತೀಚಿನ ದಿನಮಾನಗಳಲ್ಲಿ ನಮ್ಮ ಒತ್ತಡದ ಬದುಕಿನಲ್ಲಿ ಬಿಪಿ, ಶುಗರ್ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಹೆಚ್ಚಾಗಿವೆ. ಆದ್ದರಿಂದ ನಮ್ಮ ವೈದ್ಯರು ಜನರಿಗೆ ಆರೋಗ್ಯದ ಚಿಕಿತ್ಸೆ ನೀಡುವುದರ ಜೊತೆಗೆ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಲು ಸಲಹೆ ನೀಡಬೇಕು. ಅನಾರೋಗ್ಯ ಎದುರಿಸುವ ಜನರು ತಮ್ಮ ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಬೇಕು. ಆರೋಗ್ಯವಂತ ಬದುಕಿಗೆ ಉತ್ತಮವಾದ ಆಹಾರ, ಅಡುಗೆ ಎಣ್ಣೆಯನ್ನು ಬಳಕೆ ಮಾಡುವುದು ಅಗತ್ಯವಾಗಿದೆ. ಇಂದಿನ ನಮ್ಮ ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಅಧಿಕವಾಗಿರುವುದರಿಂದ ರೋಗಗಳ ಭಾದೆ ನಮ್ಮನ್ನ ಅಧಿಕವಾಗಿ ಕಾಡುತ್ತಿವೆ. ನಮ್ಮ ರೈತರು ಕೂಡ ಜಾಗೃತರಾಗಿ ಸಾವಯುವ ಕೃಷಿ ಪದ್ಧತಿಯನ್ನು ರೂಡಿಸಿಕೊಳ್ಳಬೇಕು. ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕೆಂದು ಕರೆ ನೀಡಿದರು.
ನೇತ್ರದಾನ ಶ್ರೇಷ್ಠವಾದ ದಾನ :
ನೇತ್ರದಾನವೂ ಒಂದು ಶ್ರೇಷ್ಠವಾದ ದಾನವಾಗಿದೆ ನೇತ್ರದಾನ ಮಾಡುವ ಮೂಲಕ ವ್ಯಕ್ತಿಯೊಬ್ಬನ ಬಾಳಿಗೆ ಬೆಳಕಾಗಲು ಸಾಧ್ಯ ತಮ್ಮ ಮರಣಾನಂತರ ಮತ್ತೊಬ್ಬರಿಗೆ ಬೆಳಕಾಗುವ ತಮ್ಮ ತಮ್ಮ ಕಣ್ಣುಗಳನ್ನು ದಾನ ಮಾಡಿ ಈ ನಿಟ್ಟಿನಲ್ಲಿ ನಾನು 16 ವರ್ಷಗಳ ಹಿಂದೆಯೇ ನನ್ನ ಕಣ್ಣುಗಳನ್ನು ದಾನ ಮಾಡಿರುವೆ. ತಾವು ಕೂಡಾ ನಿಟ್ಟಿನಲ್ಲಿ ನೇತ್ರದಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೆuಟಿಜeಜಿiಟಿeಜಳ್ಳಬೇಕಾದ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿಕ್ಕೋಡಿ ಡಿಎ??? ಡಾ.ಶರಣಪ್ಪ ಗಡೇದ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ಮಾತನಾಡಿದರು.
ಈ ವೇಳೆ ತಹಶೀಲ್ದಾರ ವಾಣಿ. ಯು, ರಾಜೇಶ್ ಬುರ್ಲಿ. ಶಿವಾನಂದ ಕಲ್ಲಾಪುರ. ವೀರಣ್ಣಾ ವಾಲಿ, ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ರಾಮಗೊಂಡ ಪಾಟೀಲ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎ??? ಶಿವಾನಂದ ಕಾರಜೋಳ, ಡಾ.ಕೃಷ್ಣಮೋಹನ ಜಿಂಕಾ. ಪುರಸಭಾ ಸದಸ್ಯರಾದ ರಾಜಶೇಖರ ಗುಡೋಡಗಿ ಸಂತೋಷ ಸಾವಡಕರ. ಮುಖಂಡರಾದ ರಾಮನಗೌಡ ಪಾಟೀಲ (ಶಿವನೂರ). ವಿನಾಯಕ ಬಾಗಡಿ. ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ತಾಲೂಕಾ ವೈದ್ಯಾಧಿಕಾರಿ ಡಾ.ಬಸವರಾಜ ಕಾಗೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು, ವಿಶ್ವನಾಥ ಮಾಳಿ ನಿರೂಪಿಸಿದರು. ಆರೋಗ್ಯ ಶಿಕ್ಷಣ ಅಧಿಕಾರಿ ಎ.ಬಿ ಗುಳಿಧರ ವಂದಿಸಿದರು.
100 ಹಾಸಿಗೆಯ ಸೌಲಭ್ಯವುಳ್ಳ ಅಥಣಿ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆ ಸೌಲಭ್ಯವುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಆಸ್ಪತ್ರೆಯಲ್ಲಿ ದಿನ ನಿತ್ಯ ನೇತ್ರ ಚಿಕಿತ್ಸಾ ಸೌಲಭ್ಯಕ್ಕಾಗಿ ಅವಶ್ಯಕವಾಗಿ ಬೇಕಾಗುವ ವೈದ್ಯಕೀಯ ಸಾಮಗ್ರಿಗಳ ಖರೀದಿಗೆ ಬೇಕಾಗುವ 16 ಲಕ್ಷ ರೂ.ಗಳನ್ನು ನಾನು ವ್ಯಯಕ್ತಿಕವಾಗಿ ಕೊಟ್ಟಿದ್ದು, ಇನ್ನು ಸ್ಥಳೀಯರು ನಿತ್ಯವೂ ಶಸ್ತ್ರ ಚಿಕಿತ್ಸೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು.