ಸತತ ಪ್ರಯತ್ನದಿಂದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧ್ಯ: ವೇಂಕಟೇಶ
ಸಂಜೆವಾಣಿ ವಾರ್ತೆ
ಹುಮನಾಬಾದ್: ಜೂ.30:ಪಟ್ಟಣದ ಶ್ರೀ ವೀರಭಧ್ರೇಶ್ವರ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಲಿಂಗೈಕ ಬಸವರಾಜ ಪಾಟಿಲ ಸಭಾಂಗಣದಲ್ಲಿ ಶುಕ್ರವಾರ ಟಾಟಾ ಅಡ್ವಾನ್ಸ ಸಿಸ್ಟಮ್ ಹೈದರಾಬಾದ ಕಂಪನಿಯಿಂದ ಐಟಿಐ ಪಾಸಾದ ಮತ್ತು ಐಟಿಐನಲ್ಲಿ ದ್ವಿತಿಯ ವರ್ಷ ತರಬೇತಿ ಪಡೇಯುತ್ತಿರುವ ತರಬೇತಿದಾರರಿಗೆ ನೇರ ಸಂದರ್ಶನ ಕಾರ್ಯಕ್ರಮ ಜರುಗಿತು.
ಕಂಪನಿಯ ನೇಮಕಾತಿ ವಿಭಾಗದ ವ್ಯವಸ್ಥಾಪಕ ವೇಂಕಟೇಶರವರು ಮಾತನಾಡಿ, ಸತತ ಪ್ರಯತ್ನದಿಂದ ಯಸಸ್ಸು ಸಾಧ್ಯ, ಅನ್ನುವಂತೆ ನಿವೇಲ್ಲಾ ಗ್ರಾಮೀಣ ಭಾಗದಿಂದ ಬಂದು ಕೌಶಲ್ಯಯುತ ಜ್ಞಾನವನ್ನು ಅರಿತುಕೊಂಡು ಮುಂದೆ ಒಳ್ಳೆ, ಒಳ್ಳೆ ಕೈಗಾರಿಕೆಗಳಿಗೆ ಸಂಪನ್ಮೂಲ ವಕ್ತಿಗಳಾಗಬೇಕು. ದೇಶಕ್ಕೆ ಮತ್ತು ಕುಟಂಬಕ್ಕೆ ಕಿರ್ತಿ ತರಬೇಕು ಎಂದು ಕರೆಕೊಟ್ಟರು.
ಇನ್ನೋರ್ವ ಸಿನಿಯರ್ ಎಕ್ಸಿಕ್ಯೂಟಿವ ಮುಖ್ಯಸ್ಥರಾದ ಆನಂದನ್‍ರವರು ಮಾತನಾಡಿ, ಟಾಟಾ ಕಂಪನಿಯ ಬಗ್ಗೆ ಮತ್ತು ತರಬೇತಿ ಅವಧಿ, ಸಂಬಳ ಮತ್ತು ಸೌಲಭ್ಯಗಳ ವಿಶೇಷತೆಯನ್ನು ವಿಸ್ತಾರವಾಗಿ ತಿಳಿಸಿದರು.
ಸಂಸ್ಥೆಯ ಪ್ರಾಚಾರ್ಯ ಶಿವಕುಮಾರ ಗಂಗಶೆಟ್ಟಿ ಪ್ರಸ್ತಾವಿಕ ಮಾತನಾಡಿದರು, ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಐಟಿಐ ಪಾಸಾಗಿ ವಿಶೇಷ ಸಾದನೆಗೈದ ಸುಮಾರು 15 ಸಾಧಕರಿಗೆ ಗೌರವ ಸನ್ಮಾನವನ್ನು ಮಾಡಲಾಯಿತು, ಹಾಗೂ ಕೊನೇಯ ತಿಂಗಳಲ್ಲಿ ಸಂಸ್ಥೆಯಲ್ಲಿ ಏರ್ಪಡಿಸಲಾದ ಕೌಶಲ್ಯ ಶಕ್ತಿ ವಸ್ತು ಪ್ರದರ್ಶನದಲ್ಲಿ ಪ್ರಥಮ, ದ್ವಿತಿಯ, ಮತ್ತು ತೃತಿಯ, ಸ್ಥಾನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ನೇರ ಸಂದರ್ಶನದಲ್ಲಿ ಸುಮಾರು 300 ತರಬೇತಿದಾರರು ಭಾಗವಹಿಸಿದ್ದರು, ಅದರಲ್ಲಿ 50 ವಿಧ್ಯಾರ್ಥಿಗಳಿಗೆ ಅಲ್ಲಿಯೆ ನೆಮಕಾತಿ ಆದೇಶ ನೀಡಲಾಯಿತು, ಕಾರ್ಯಕ್ರಮದಲ್ಲಿ ರಾಜೆಂದ್ರ ಠಾಕುರ, ರಮೇಶ ಹೊಸಮನಿ, ಶಶಿಕಾಂತ ರೆಡ್ಡಿ, ಅಶೋಕ ಪುಜಾರಿ, ಮಲ್ಲಿಕಾರ್ಜುನ ನಂದಿ, ಜಗಧೀಶ ಚಿತ್ರೇ, ಇಂದು ಶೇಖರ ಡಿ, ಮಲ್ಲಮ್ಮಾ ಪಾಟೀಲ, ಸಬ್ಬನ ಆರತಿ, ತುನುಜಾ ಘಂಟೆ, ನಿರ್ಮಲೆ ಸತೀಶ, ಶಿವಪ್ರಕಾಶ ಖಪ್ಪರ, ರಾಜೇಶ ಎನ್, ನಿವೇಧಿತಾ, ವೈಶಾಲಿ ಪಂಚಾಳ, ಇದ್ದರು ಅಮರ ಕುಲಕರ್ಣಿ ನಿರೂಪಿಸಿದರು, ವಿಶ್ವನಾಥ ವಿ ಬಿರಾದರ ವಂದಿಸಿದರು,