ಯೋಗ ಮನಸ್ಸು, ದೇಹವನ್ನು ಸದೃಢವನ್ನಾಗಿಸುತ್ತದೆ:ಅನಿಲ ಗುರೂಜಿ
ಸೈದಾಪುರ:ಜೂ.30:ಯೋಗ ಮನಸ್ಸು ಹಾಗೂ ದೇಹವನ್ನು ಸದೃಢವನ್ನಾಗಿಸುವ ಮೂಲಕ ಉತ್ತಮ ಸಾಧನೆಗೆ ನೆರವು ನೀಡುತ್ತದೆ ಎಂದು ಯೋಗ ಗುರು ಅನಿಲ ಗೂರುಜಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯೋಗ ಪ್ರಾಚಿನ ಕಲೆಯಾಗಿದ್ದೂ, ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇತ್ತಿಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ಯೋಗದ ಮೊರೆ ಹೋಗುತ್ತಿದ್ದಾರೆ. ಇದೊಂದು ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆಯಾಗಿದೆ. ಪ್ರತಿ ನಿತ್ಯ ಯೋಗ ಮಾಡುವುದರಿಂದ ಉತ್ತಮವಾದ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಯೋಗ ಗುರು ಅನಿಲ ಗೂರುಜಿಯವರು ಪ್ರತಿ ವರ್ಷ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉತ್ತಮ ಯೋಗದ ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರಿಂದ ಜಿಲ್ಲೆಯಲ್ಲಿ ಯೋಗದ ಮಹತ್ವ ಹೆಚ್ಚಾಗುವಂತೆ ಮಾಡಿದೆ. ಇನ್ನೂ ಹೆಚ್ಚಿನ ಸೇವೆ ಇವರದಾಗಲಿ.
ಲಿಂಗಾರೆಡ್ಡಿ ನಾಯಕ ಮುಖ್ಯಗುರು