ಶಾಲೆಯ ಕೊಠಡಿಯ ಕಟ್ಟಡಕ್ಕೆ ಹಳೆ ವಿದ್ಯಾರ್ಥಿಗಳು ಶಾಸಕರಿಗೆ ಮನವಿ
ಹೂವಿನ ಹಿಪ್ಪರಗಿ:ಜೂ.30: ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತ್ತು. ಸರಕಾರಿ ಹೆಣ್ಣು ಮಕ್ಕಳ ಪ್ರಥಮಿಕ ಶಾಲೆಯ. ಎರಡು ಶಾಲೆಯ ಒಂದೇ ಮೈದಾನದಲ್ಲಿ ಮತ್ತು ಒಂದೇ ಕಂಪೌಂಡದಲ್ಲಿ. ನಡೆಯುತ್ತಿದ್ದು.. ಎರಡು ಶಾಲೆಗಳಿಗೆ ಹೊಸ.ಕೊಠಡಿಗಳ ತುಂಬಾ ಅವಶ್ಯಕತೆ ಇದೆ ಮತ್ತು ಕೊಠಡಿಗಳ ರಿಪೇರಿಯ ಕೂಡ ಮಾಡಬೇಕಾಗಿದೆ.ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 340. ಇದ್ದು ಮತ್ತು ಹೆಣ್ಣು ಮಕ್ಕಳು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 215. ಇರುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ. ಮತ್ತು ಕಲಿಕೆಗೆ ತುಂಬಾ ತುಂಬಾ ತೊಂದರೆ ಆಗಿದೆ.. ಮಳೆ ಬಂದರೆ ಶಾಲೆಯ. ಕೊಠಡಿಗಳು ಸೋರುತ್ತಾವೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಕೋಣೆಗಳು ಬೇಕಾಗಿದೆ. ಕೊಠಡಿಗಳ ಇಲ್ಲದ ಕಾರಣ ಶಿಕ್ಷಕರಿಗೆ ತುಂಬಾ ಸಮಸ್ಯೆ ಉಂಟು ಮಾಡಿದೆ.ಕೊಠಡಿಗಳು ಇಲ್ಲದ ಕಾರಣ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೈದಾನದಲ್ಲಿ ಕೂಡಿಸಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಇದೆ.. ದಿಂಡವಾರ ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘ ಮತ್ತು. ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಅಧ್ಯಕ್ಷರು. ಗ್ರಾಮದ ಹಿರಿಯರು ಮುಖಂಡರು ಶಿಕ್ಷಣ ಪ್ರೇಮಿಗಳು
ಮತ್ತು ದಾನಿಗಳು ಕೂಡಿಕೊಂಡು ಶಾಲೆಯ ಒಳ್ಳೆಯ ಅಭಿವೃದ್ಧಿನ್ನು ಮಾಡಲಾಗಿದೆ..ದಿಂಡವಾರ ಗ್ರಾಮದ. ಎರಡು ಶಾಲೆಯ ಕೋಣೆಗಳು ಮತ್ತು ರಿಪೇರಿಯ ಸಲುವಾಗಿ. ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ. ನಮ್ಮ ಮತಕ್ಷೇತ್ರದ ದೇವರ ಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ಶಾಸಕರಾದ. ಶ್ರೀ
ರಾಜುಗೌಡ ಪಾಟೀಲ್. ಕುದುರಿ ಸಾಲವಾಡಗಿ ಇವರಿಗೆ ಕೊಠಡಿಯ ನಿರ್ಮಾಣಕ್ಕಾಗಿ ಮತ್ತು ರಿಪೇರಿಗಾಗಿ ತಮ್ಮ ಅನುದಾನದಲ್ಲಿ. ಮಂಜುರ ಮಾಡಬೇಕಾಗಿ ಮನವಿಯನ್ನು ನೀಡಿ ವಿನಂತಿಸಿಕೊಂಡರು. ನಾವು ಕೂಡ ಶಾಲೆಗೆ ಭೇಟಿ ನೀಡಿದಾಗ ಶಾಲೆಯ ಮುಖ್ಯ ಗುರುಗಳು ವಿಷಯ ತಿಳಿಸಿದರು. ಆ ಸಂದರ್ಭದಲ್ಲಿ ತಾಲೂಕ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ನಾವು ಕೂಡ ತಿಳಿಸಿದ್ದೇವೆ. ಮತ್ತು ಖುದ್ದಾಗಿ ಅವರಿಗೆ ಭೇಟಿಯಾಗಿ ಈ ವಿಷಯಗಳು ಚರ್ಚೆಯನ್ನು ಮಾಡಲಾಗಿದೆ ಈ ಸಂದರ್ಭದಲ್ಲಿ. ಹಳೆಯ ವಿದ್ಯಾರ್ಥಿಗಳ ಸಂಘದ ಎಲ್ಲಾ ಸದಸ್ಯರು. ಸಂಘದ ಮುಖ್ಯಸ್ಥರು ಮತ್ತು ಶಿಕ್ಷಣ ಪ್ರೇಮಿಗಳು. ವಿಕಾಸ್ ಜೋಗಿ. ಮುತ್ತು ಹೂಗಾರ್.
ಶಿವಲಿಂಗ ನೇಗಿನಾಳ.ಸುರೇಶ್ ಬೂದಿಹಾಳ. ಗುಂಡು ಕೊಂಡುಗುಳಿ. ಎಲ್ಲಾ ಹಳೆಯ ವಿದ್ಯಾರ್ಥಿಗಳು ಮತಕ್ಷೇತ್ರದ ಶಾಸಕರಿಗೆ ಮನವಿ ನೀಡಿ ಉಪಸ್ಥಿತರಿದ್ದರು.