ಆಂಜನೇಯ ಸ್ವಾಮಿ ದೇವಸ್ಥಾನಲ್ಲಿ ಶಾಸಕರಿಂದ ಪೂಜೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೩೦; ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕರಾದ ಡಾ.‌ಶಾಮನೂರು ಶಿವಶಂಕರಪ್ಪ ಅವರು ನಗರದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಶನಿವಾರದ ಹಿನ್ನಲೆ ಇಲ್ಲಿನ ದೊಡ್ಡಪೇಟೆಯಲ್ಲಿ ಶ್ರೀ ರಾಮಾಂಜನೆಯ ದೇವಸ್ಥಾನದಲ್ಲಿ ಜನತೆಗೆ ಸುಖಶಾಂತಿ ಸಂಮೃದ್ದಿ ಲಭಿಸಲೆಂದು ವಿಶೇಷ ಪೂಜೆ ಸಲ್ಲಿಸಿ ನಮಿಸಿದರು.