ಶಾಸಕ ಶಾಮನೂರು ಶಿವಶಂಕರಪ್ಪರಿಂದ ಧಾನ್ಯಗಳ ಪರಿಶೀಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೩೦; ಮಾಜಿ ಸಚಿವರು ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕರಾಗಿರುವ ಡಾ.ಶಾಮನೂರು ಶಿವಶಂಕರಪ್ಪ ಅವರು ಮಾರುಕಟ್ಟೆಯಲ್ಲಿ ಧಾನ್ಯಗಳ ಪರಿಶೀಲನೆ ನಡೆಸಿದರು. ಇಲ್ಲಿನ ಚೌಕಿಪೇಟೆಯಲ್ಲಿ ಆಹಾರ‌ ಧಾನ್ಯಗಳ‌ ಗುಣಮಟ್ಟ ಪರಿಶೀಲನೆ ನಡೆಸಿದರು. ಚೌಕಿಪೇಟೆಯಲ್ಲಿ ಧಾನ್ಯಗಳ ಮಾರಾಟಗಾರರು ಶಾಸಕರಿಗೆ ಧಾನ್ಯಗಳನ್ನು ನೀಡಿ ಪರೀಕ್ಷೆಗೆ ಒಳಪಡಿಸಿದ್ದು ಕಂಡು ಬಂತು. ಉತ್ತಮ ಗುಣ ಮಟ್ಟದ ಧ್ಯಾನ್ಯಗಳನ್ನು ಮಾರಾಟ ಮಾಡುವಂತೆ ಮಾರಾಟಗಾರರಿಗೆ ಶಾಸಕರು ಸಲಹೆ ನೀಡಿದರು. ಈ ವೇಳೆ ಧ್ಯಾನಗಳ ಮಾರಾಟಗಾರರು ಇದ್ದರು.