ಕೆಂಪೇಗೌಡರ ಆದರ್ಶಗಳು ಯುವ ಪೀಳಿಗೆಗೆ ಪಸರಿಸಲಿ
ಸಂಜೆವಾಣಿ ವಾರ್ತೆ
ಜಗಳೂರು.ಜೂ.೨೮; :- ಜಾತ್ಯಾತೀತವಾಗಿ ಎಲ್ಲಾವರ್ಗದವರ ಏಳ್ಗೆಯ ದೂರದೃಷ್ಠಿಯಿಂದ ಬೆಂಗಳೂರು ನಗರ ನಿರ್ಮಿಸಿದ ಕೆಂಪೇಗೌಡ ಅವರ ಆದರ್ಶಗಳು ಪೀಳಿಗೆಯಿಂದ ಪೀಳಿಗೆಗೆ ಪಸರಿಸಲಿ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರವರ 515 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.ಸರ್ಕಾರದಿಂದ ಮಹಾನೀಯರ ಜಯಂತಿಗಳನ್ನು ಆಚರಣೆ ಮಾಡುತ್ತಿರುವುದು ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಮಕ್ಕಳ ಜೀವನದಲ್ಲಿ ಪ್ರೇರಣೆಯಾಗುವ ಸದುದ್ದೇಶ ದಿಂದ ಎಂದು ತಿಳಿಸಿದರು.ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೆಗೌಡ ಅವರ ಹೆಸರು ಇಟ್ಟಿರುವುದು ಸಂತಸದ ಸಂಗತಿ ಎಂದರು.ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ತಾಲೂಕು ಕಛೇರಿಯಿಂದ ಅಂಬೇಡ್ಕರ್ ವೃತ್ತ,ಮಹಾತ್ಮಗಾಂಧಿ ವೃತ್ತದ ಮೂಲಕ ಡೊಳ್ಳು ಕುಣಿತ,ವಾಧ್ಯವೃಂದದಮೂಲಕ ಶಾಲಾ ವಿದ್ಯಾರ್ಥಿಗಳು ಮೆರವಣಿಗೆ ನಡೆಸಲಾಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಕೆ.ಪಿ.ಸಿ.ಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ ಮ್ಮದ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಜಗಳೂರು ಜಗಳೂರು ಬ್ಲಾಕ್ ಎಸ್ಸಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಮಹೇಶ್ವರಪ್ಪ ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ತಾ.ಪಂ ಪ್ರಭಾರಿ ಇಓ ಮಿಥುನ್ ಕಿಮಾವತ್, ಬಿಇಓ ಹಾಲಮೂರ್ತಿ,ಸಿಡಿಪಿಓ ಬಿರೇಂದ್ರ ಕುಮಾರ್.ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ ವಿಜಯ್ ಕೆಂಚೋಳ್, ಸೇರಿದಂತೆ ಇದ್ದರು.