ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಂಜೆವಾಣಿ ವಾರ್ತೆ
ರಾಣೇಬೆನ್ನೂರು.ಜೂ.೩೦ : ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯ ಹಾಗೂ ದಾವಣಗೆರೆಯ ಎಸ್.ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು  ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿತ್ತು.ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಬಿರವನ್ನು ಉದ್ಘಾಟಿಸಿ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ  ಡಾ.ಎಸ್.ಜಿ. ಮಾಕನೂರ್ ಹೇಳಿದರು. ಮಹಾವಿದ್ಯಾಲಯದ ಸಿಬ್ಬಂದಿ ಜೊತೆಗೆ ಅವರ ಕುಟುಂಬದ  ವರ್ಗದವರಿಗೆ ಈ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಇ. ಸಿ. ಜಿ ಮತ್ತು ಬಿ. ಪಿ. ಚೆಕ್ ಅಪ್ ಕೂಡಾ ನಡೆಯಿತು.ವೇದಿಕೆಯಲ್ಲಿ ಡೀನ್ ಅಕ್ಯಾಡೆಮಿಕ್ ಡಾ.ಎಸ್.ಎಫ್. ಕೊಡದ್, ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ.ಎಂ.ಪರಮೇಶ್ವರಪ್ಪ , ಡಾ.ಮುಜಿಬುಲ್ಲಾ ಖಾನ್, ಡಾ.ಬಿ.ಮಹೇಶ್ವರಪ್ಪ , ಪ್ರೊ.ದಿನೇಶ್ ಮಾಗನೂರ್  ಉಪಸ್ಥಿತರಿದ್ದರು.  ಎಸ್.ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಸಿಬ್ಬಂದಿವರ್ಗದವರಾದ ಡಾ. ಬಿ. ಗುರುರಾಜ್ , ಗುಡ್ಡಪ್ಪ ಎಸ್. ಎ. , ವಿದ್ಯಾ ಎನ್. ಕೆ. , ಆಂಜನಪ್ಪ ಶಿಬಿರದಲ್ಲಿ ಭಾಗವಹಿಸಿದ್ದರು.ಉದ್ಯೋಗ ಮತ್ತು ತರಬೇತಿ ಅಧಿಕಾರಿ ಡಾ. ಡಿ. ಎಸ್. ವಿಶ್ವನಾಥ ಸ್ವಾಗತಿಸಿದರು. ಪ್ರೊ. ವಿ. ಜಿ. ಮೂಕಾಂಬಿಕಾ ವಂದಿಸಿದರು.