ಕುಡಿತದ ಕೆಡುಕಿನ ಬಗ್ಗೆ ಜನಾಂದೋಲನಗಳು ಹೆಚ್ಚಾಗಬೇಕು; ಡಾ ಎಚ್ ಕೆ ಎಸ್ ಸ್ವಾಮಿ
ಚಿತ್ರದುರ್ಗ. ಜೂ.೩೦; ಕುಡಿತದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ಇನ್ನು ಹೆಚ್ಚಾಗಬೇಕು, ಬಡಜನರಂತೂ ಎಲ್ಲೆಂದಲ್ಲಿ ಕುಡಿತದ ಚಟಕ್ಕೆ ಬಲಿಯಾಗಿ, ಎಲ್ಲೆಂದರಲ್ಲಿ ಬಿದ್ದು ಒದ್ದಾಡುವ ದೃಶ್ಯ ರಸ್ತೆಗಳಲ್ಲಿ ಕಾಣಲು ಸಿಗುತ್ತದೆ. ಇವರ ಕುಟುಂಬದ ಸದಸ್ಯರಿಗೆ ಇವರ ಸ್ಥಿತಿ ನೋಡಿ ಹೃದಯವಿದ್ರಾಯಕವಾಗುತ್ತದೆ, ಹಾಗಾಗಿ ಸರ್ಕಾರ ಈ ಕುಡಿತವನ್ನು ನಿಲ್ಲಿಸುವುದರ ಬಗ್ಗೆ, ಕುಡಿತದಿಂದ ಬರುವ ಆದಾಯದ ಬಗ್ಗೆ ತಿರಸ್ಕಾರ ಭಾವನೆಯನ್ನು ಹೊಂದಿ, ಸಮಾಜದಲ್ಲಿರುವ ದುಶ್ಚಟಗಳನ್ನ ನಿವಾರಿಸುವುದರ ಬಗ್ಗೆ ಕಾರ್ಯಯೋನ್ಮುಖರಾಗಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಡಾ ಎಚ್ ಕೆ ಎಸ್ ಸ್ವಾಮಿಯವರು ವಿನಂತಿಸಿಕೊಂಡಿದ್ದಾರೆ.ಮೊದಲೆಲ್ಲಾ ಕುಡಿತದ ವಿರುದ್ಧ ಸರ್ಕಾರಗಳು ಒಂದಿಷ್ಟು ಮಾತನ್ನಾದರೂ ಆಡುತ್ತಿದ್ದವು ಈಗ ಅದರ ಬಗ್ಗೆ ಸ್ವಲ್ಪವೂ ಚಕಾರವಿಲ್ಲ. ಸರ್ಕಾರಗಳು ಮದ್ಯದ ದುಡ್ಡಿನ ಕಣ್ಣು ಹಾಯಿಸುವುದರ ಬಗ್ಗೆ ಗಾಂಧೀಜಿಯವರ ಕಾಲದಿಂದಲೂ ಹೋರಾಟಗಳಾಗಿದ್ದಾವೆ. ಇಂತಹ ಹಣವನ್ನು ಸಮಾಜ ಸುಧಾರಣೆಗೆ ಬಳಕೆಯಾಗಲು ಬಳಸಬಾರದು. ಅದನ್ನ ಶಿಕ್ಷಣಕ್ಕೂ ಸಹ ಬಳಕೆ ಮಾಡಬಾರದು ಎಂದು ವಿರೋಧಿಸಿದ್ದರು. ಜನರು ಕುಡಿತಕ್ಕೆ ಈಡಾದವರನ್ನ ಮುಕ್ತಗೊಳಿಸಲು ಧರ್ಮಸ್ಥಳ ಸಂಘಗಳು ಪಾನ ಮುಕ್ತ ಚಟುವಟಿಕೆಗಳು ಹೆಚ್ಚು ತೀಕ್ಷ÷್ಣವಾಗಿ ಕೆಲಸ ಮಾಡುತ್ತಿವೆ. ಪ್ರತಿ ಮನೆಯಲ್ಲಿ, ಮನೆ ಮನೆಯಲ್ಲಿ ಸಹ ಕುಡಿಯುವವರ ಸಂಖ್ಯೆ ಅಧಿಕವಾಗಿ, ರಸ್ತೆ ಬೀದಿ ಬೀದಿಗಳಲ್ಲಿ ಕುಡಿತದ ಅಂಗಡಿಗಳು ತೆರೆಯಲ್ಪಡುತ್ತಿದ್ದು, ಜನರನ್ನ ದಾರಿ ತಪ್ಪಿಸುವಂತಾಗುತ್ತಿದೆ ಎಂದರು.ಕುಡಿತದ ನಿಷೇಧ ಬಗ್ಗೆ ಕೆಲವೊಂದು ರಾಜ್ಯಗಳು ಗಟ್ಟಿ ತೀರ್ಮಾನ ತೆಗೆದುಕೊಂಡು, ಅದರಿಂದ ಬರುವ ಆದಾಯವನ್ನು ಸಹ ತಿರಸ್ಕರಿಸಿ, ಜನರ ಅಭಿವೃದ್ಧಿಯವೇ ಮುಖ್ಯ ಎಂದು ಕಾರ್ಯನಿರ್ವಸುತ್ತಿರುವ ಉದಾಹರಣೆಗಳು ನಮ್ಮಲ್ಲಿ ಬೇಕಾದಷ್ಟಿವೆ. ಆದರೆ ಕೆಲವು ರಾಜ್ಯಗಳು ಮಾತ್ರ ಕುಡಿತದ ಆದಾಯದ ಮೇಲೆ ರಾಜ್ಯದ ಅಭಿವೃದ್ಧಿ ಎಂದು ನಂಬಿಕೆ ಇಟ್ಟು, ಕುಡಿತಕ್ಕೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿದ್ದು, ಜನರು ಎಲ್ಲಿಂದರಲ್ಲಿ ಕುಡಿದು, ರಸ್ತೆ ಅಪಘಾತಗಳನ್ನ ಮಾಡಿಕೊಂಡು, ಹೆಚ್ಚು ಹಿಂಸಾಚಾರದಲ್ಲಿ ತೊಡಗಿ, ಗಲಾಟೆ, ಗದ್ದಲ, ಕೊಲೆ, ಕಳ್ಳತನ, ದರೋಡೆ, ಈ ರೀತಿ ಸಮಾಜಘಾತಕ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ, ಕುಡಿತದ ನಿಷೇಧದ ಬಗ್ಗೆ, ಕಡೆಯ ಪಕ್ಷ ಸಾರ್ವಜನಿಕವಾಗಿ ಮಾತನಾಡುವುದನ್ನಾದರೂ ನಾವು ಶುರು ಮಾಡಬೇಕಾಗಿದೆ ಎಂದಿದ್ದಾರೆ.