ವಿದ್ಯಾರ್ಥಿಗಳು ಸಮಾಜ ಸುಧಾರಿಸುವ ಗುರಿಯತ್ತ ಹೆಜ್ಜೆ ಹಾಕಬೇಕು
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೩೦: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಸಮಾಜ ಸುಧಾರಿಸುವ ಗುರಿಯತ್ತ ಹೆಜ್ಜೆ ಹಾಕಬೇಕು, ಸಂವಿಧಾನವನ್ನು ಗೌರವಿಸಿ, ಸನ್ನಡತೆಯಿಂದ ಜೀವನ ಸಾಗಿಸುವಂತೆ ವಿದ್ಯಾರ್ಥಿಗಳನ್ನ ತಯಾರು ಮಾಡಲು ಎನ್‌ಎಸ್‌ಎಸ್ ಸಹಕಾರಿಯಾಗಿದೆ. ತಂದೆ ತಾಯಿಗಳಿಗೆ ಗೌರವ ನೀಡಿ, ಹಿರಿಯರನ್ನ ಗೌರವಿಸಿ ಗುಣಮಟ್ಟದ ಶಿಕ್ಷಣ ಪಡೆದು, ಅತ್ಯುನ್ನತ ನಾಗರಿಕರಾಗಬೇಕಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿಗಳಾದ ಅಶೋಕ್ ಕುಮಾರ್ ಪಾಳೆದ್ ಮಾತನಾಡಿದರು.ಅವರು ಕ್ಯಾದಿಕೆರೆ ಗ್ರಾಮದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ 1, 2 ಮತ್ತು 3 ಘಟಕಗಳ ಹಮ್ಮಿಕೊಂಡಿದ್ದ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದಾರೆ.ದಾವಣಗೆರೆ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ನೋಡಲ್ ಅಧಿಕಾರಿಗಳಾದ ಎಚ್ ಆರ್ ತಿಪ್ಪೇಸ್ವಾಮಿ ಮಾತನಾಡುತ್ತಾ ವಿಜ್ಞಾನದ ವಿದ್ಯಾರ್ಥಿಗಳಿಗೆ ಗ್ರಾಮದಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ಒಳ್ಳೆಯ ಸದಾವಕಾಶ, ಗ್ರಾಮಕ್ಕೆ ಬಂದು ಸೇವೆ ಮಾಡಿದ್ದು ಗ್ರಾಮಸ್ಥರು ಮನಸಲ್ಲಿ ಉಳಿಯುವಂತೆ ನಿಮ್ಮ ಸೇವೆ ಇರಲಿ ಎಂದು ಆಶಿಸಿದರುಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಭಾಗ್ಯಮ್ಮ ದೇವೇಂದ್ರಪ್ಪ ಮಾತನಾಡುತ್ತಾ ಅಂಬೇಡ್ಕರ್, ಗಾಂಧೀಜಿ, ಬಸವಣ್ಣನವರನ್ನು ಮಾದರಿ ಮಾಡಿಕೊಂಡು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು, ವಿದ್ಯಾರ್ಥಿಯ ಜೀವನ ಅಮೂಲ್ಯವಾದ ಜೀವನ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು