ಡಾ. ಕೆ. ಜೈಮುನಿಗೆ ಮೇಘ ಮೈತ್ರಿ ಮಾಧ್ಯಮ ರತ್ನ ಪ್ರಶಸ್ತಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೨೯ : ಮೇಘ ಮೈತ್ರಿ ಕನ್ನಡ ಸಾಹಿತ್ಯ ಪರಿಷತ್‌   ಆಶ್ರಯದಲ್ಲಿ  ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌   ಭವನದಲ್ಲಿ ಆಯೋಜಿಸಿದ್ದ ಮೇಘ ಮೈತ್ರಿ ಪರಿಸರ ಜಾಗೃತಿ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕವಿ ಗೋಷ್ಠಿ, ಸಸಿ ನೆಡುವ ಕಾರ್ಯಕ್ರಮ, ಸಸಿ ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ   ಪ್ರಧಾನವನ್ನು ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಸಾಲುಮರದ ತಿಮ್ಮಕ್ಕ ಇವರ ಪುತ್ರರಾದ ಡಾ.ಬಳ್ಳೂರ್ ಉಮೇಶ್  ಡಾ. ಪುರಸ್ಕೃತರಾದ ಕೆ. ಜೈಮುನಿಗೆ ಮಾಧ್ಯಮ ಕ್ಷೇತ್ರದಲ್ಲಿ ಮೇಘ ಮೈತ್ರಿ ಮಾಧ್ಯಮ ರತ್ನ ನೀಡಿ ಸನ್ಮಾನಿಸಿ ಗೌರವಿಸಲಾಯಿತು. .ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಕಮತ್ಗಿ ಸಮ್ಮೇಳನದ ಅಧ್ಯಕ್ಷರಾದ ಡಾ. ಪರಿಸರ ಮಂಜು,  ಭೂ ವಿಜ್ಞಾನ ಪ್ರಾಧ್ಯಾಪಕರಾದ ಡಾ. ಪಿ. ಜೆ. ರೇಣುಕಾ ಪ್ರಸಾದ್, ಶಿವಣ್ಣ ಜಿ. ಸಮಾಜ ಸೇವಕರು, ಮಾಯಣ್ಣ.ವಸಂತಮ್ಮ. ಕಾವೇರಪ್ಪ. ಶ್ವೇತ. ಪ್ರಕಾಶ್. ಡಾ.ಭಾಗ್ಯ ಮುಂತಾದವರು ಉಪಸ್ಥಿತರಿದ್ದರು.

