ಅತ್ಯಾಚಾರಕ್ಕೊಳಗಾದ 13 ವರ್ಷದ ಬಾಲಕಿ ಸಾವು ಹಿನ್ನೆಲೆ:ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರು ದಾಖಲು
ಕಲಬುರಗಿ:ಜೂ.29: ಕಲಬುರಗಿ ನಗರದಲ್ಲಿ ಅತ್ಯಾಚಾರಕ್ಕೊಳಗಾಗಿ 13 ವರ್ಷದ ಬಾಲಕಿ ಸಾವನಪ್ಪಿರುವ ಘಟನೆಗೆ ತೀವ್ರ ವಿμÁದ ವ್ಯಕ್ತಪಡಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳಾ ಅವರು, ಈ ಕುರಿತು ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
13 ವರ್ಷದ ಬಾಲಕಿ 8 ತಿಂಗಳ ಗರ್ಭಿಣಿಯಾಗಿರುವ ವಿಷಯ ತಾಯಿಗೆ ತಿಳಿದ ನಂತರ ಆಸ್ಪತ್ರೆಗೆ ದಾಖಲಿಸಿದ ನಂತರ ಅಸುನೀಗಿರುವುದು ವಿμÁಧನೀಯ ಎಂದಿರುವ ಅವರು, ಇದನ್ನು ಗಂಭರೀವಾಗಿ ಪರಿಗಣಿಸಿ ಆಯೋಗವು ಸಹ ತನಿಖೆ ನಡೆಸಲಿದೆ ಎಂದರು.
ಇನ್ನೂ ಈ ಸಂಬಂಧ ಕಲಬುರಗಿ ನಗರದ ಸಬ್ ಅರ್ಬನ್ ಪೆÇಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳ ವಿರುದ್ಧ ಮಕ್ಕಳ ರಕ್ಷಣಾ ಕಾಯ್ದೆ (ಪೆÇೀಕ್ಸೋ) ಕಾಯ್ದೆಯಡಿ ಗುನ್ನೆ ಸಂ.131/2024 ರಂತೆ ಪ್ರಕರಣ ಸಹ ದಾಖಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.