ಹಲಕರ್ಟಿ ಗ್ರಾ.ಪಂ.ಎದುರೇ ಗಬ್ಬು ನಾರುತ್ತಿರುವ ಚರಂಡಿ ನೀರು
ವಾಡಿ,ಜೂ.29-ಚಿತ್ತಾಪುರ ತಾಲುಕ್ಕಿನ ಹಲಕರ್ಟಿ ಗ್ರಾಮ ಪಂಚಾಯತ ಎದುರೇ ಚರಂಡಿ ನೀರು ತುಂಬಿ ಗಬ್ಬು ನಾರುತ್ತಿದೆ.
ಗ್ರಾಮ ಪಂಚಾಯತಿ ಮುಂದೇ ಈ ಸ್ಥಿತಿಯಾದರೆ ಇನ್ನೂ ಗ್ರಾಮದ ಸ್ಥಿತಿ ಹೇಗಿರಬಹುದು ಎಂಬುವುದನ್ನು ನೀವೇ ಊಹಿಸಿ. ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನ ಇರುವುದು ಇದೇ ಗ್ರಾಮದಲ್ಲಿ. ರಾಜ್ಯವು ಸೇರಿದಂತೆ ನೆರೆ ರಾಜ್ಯಗಳಿಂದ ನೂರಾರು ಜನ ಭಕ್ತಾಧಿಗಳು ದೇವಸ್ಥಾನಕ್ಕೆ ಬಂದು ಹೋಗುತ್ತಾರೆ. ಇಷ್ಟೇಲ್ಲಾ ಪ್ರಸಿದ್ಧಿ ಹೊಂದಿರುವ ಗ್ರಾಮದ ಸ್ವಚ್ಛತೆಗೆ ಮಾತ್ರ ಗ್ರಾಮ ಪಂಚಾಯತಿ ಆದ್ಯತೆ ನೀಡದೇ ಇರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ. ಗ್ರಾಮ ಪಂಚಾಯತಿ ಈಗಲಾದರೂ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.