ನಾಳೆ ಶ್ರೀ ಗಂಗಾಪರಮೇಶ್ವರಿ ಜಯಂತ್ಯೋತ್ಸವ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.29: ಶ್ರೀ ಗಂಗಾಪರಮೇಶ್ವರಿ ಜಯಂತ್ಯೋತ್ಸವವನ್ನು ಜೂ.‌28 ರ ನಾಳೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗಂಗಾಪರ ಮೇಶ್ವರಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ನಿಂಗರಾಜ್ ಹಾವನೂರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ನಾಳೆ ಬೆಳಗ್ಗೆ 10.30 ಕ್ಕೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಿಂದ ಪೂರ್ಣಕುಂಭದ ಮೆರವಣಿಗೆ ವಿಶೇಷ ಕಲಾ ತಂಡಗಳೊಂದಿಗೆ ನಡೆಯಲಿದೆ. ಶ್ರೀ ನಿಮಿಷಾಂಬ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಸಾನಿಧ್ಯ ವಹಿ ಸುವರು. ಸಮಾಜದ ಜಿಲ್ಲಾಧ್ಯಕ್ಷ ಮಾಗಾನ ಹಳ್ಳಿ ಮಂಜುನಾಥ್ ಇತರರು ಭಾಗವಹಿಸು ವರು ಎಂದು ತಿಳಿಸಿದರು.ಪೂರ್ಣಕುಂಭ ಮೆರವಣಿಗೆಯಲ್ಲಿ ಭಾಗವಹಿ ಸುವಂತಹ ಮಹಿಳೆಯರು ಹೆಸರು ನೋಂದ ಣಿ ಮಾಡಿಕೊಳ್ಳಬೇಕು. ಮೆರವಣಿಗೆ ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಂದು ತಿಳಿಸಿದರು.ಸಮಿತಿ ಗೌರವಾಧ್ಯಕ್ಷ ಪಿ.‌ಗಂಗಾಧರಪ್ಪ, ಕಾರ್ಯದರ್ಶಿ ಎಸ್. ಚಂದ್ರಪ್ಪ, ಸುರೇಶ್, ರವಿಕುಮಾರ್ ಇತರರು ಇದ್ದರು.