ಬಾಲಕನ ಮೇಲೆ ಬೀದಿನಾಯಿಗಳ ದಾಳಿ
ಕಲಬುರಗಿ, ಜೂ.29- ಬೀದಿ ನಾಯಿಗಳ ದಾಳಿಯಿಂದ ತೀವ್ರ ಗಾಯಗೊಂಡಿರುವ ಅರು ವರ್ಷದ ಬಾಲಕನನ್ನು ಚಿಕಿತ್ಸೆಗಾಗಿ ಜೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾನಗರದ ಸಂಚಿತ ತಂದೆ ರವಿ ಎಂಬ 6 ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಕಚ್ಚಿಹಾಕಿವೆ ಗಾಯಗೊಂಡ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಬಾಲಕ ಭಯಭಿತನಾಗಿದ್ದಾನೆ.
ಮಹಾನಗರದಲ್ಲಿ ಬೀದಿನಾಯಿಗಳ ಹವಳಿ ಹೆಚ್ಚಾಗಿದ್ದು, ನಾಯಿಗಳ ದಾಳಿಯ ಘಟನೆಗಳು ಅಲ್ಲಲ್ಲಿ ಸಂಭವಿಸುತ್ತಿವೆ. ಬೀದಿನಾಯಿಗಳನ್ನು ಮಹಾನಗರದಿಂದ ಹೊರ ಹಾಕುವಂತೆ ವಿದ್ಯಾನಗರದ ನಾಗರಿಕರು ಒತ್ತಾಯಿಸಿದ್ದಾರೆ.