ಕಮರವಾಡಿ: ಹಾಡು ಹಗಲೇ ಮನೆ ಕಳ್ಳತನ
ವಾಡಿ,ಜೂ.29-ಹಾಡುಹಗಲೇ ಮನೆಯ ಮೇಲ್ಛಾವಣಿ ಕಿತ್ತಿ ಮನೆಯಲ್ಲಿದ್ದ ಒಡವೆ ಹಾಗೂ ನಗದು ಹಣ ದೋಚಿದ ಪ್ರಕರಣ ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ಮಲ್ಲಪ್ಪ ಮಾಂಗ್ ಅವರ ಪುರಕಲ್ಲು ಮನೆಯ ಮೇಲ್ಛಾವಣಿ ಕಿತ್ತು ಒಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ 45 ಗ್ರಾಂ ಚಿನ್ನ ಹಾಗೂ 5000 ನಗದು ಹಣ ದೋಚಿದ್ದಾರೆ.
ಕೃಷಿ ಕೆಲಸಕ್ಕೆ ನಿಮಿತ್ತ ಹೋಗಿದ್ದ ಕುಟುಂಬ ಸದಸ್ಯರು ಸಂಜೆ ಮನೆಗೆ ಮರಳಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ಮಲ್ಲಪ್ಪ ಮಾಂಗ್ ನೀಡಿದ ದೂರಿನ ಮೇರೆಗೆ ಚಿತ್ತಾಪುರ ಪಿಎಸ್‍ಐ ಶ್ರೀಶೈಲ್ ಅಂಬಾಟಿ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.