ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ತಲುಪಿಸಿ: ಶ್ರೇಣಿಕ ಕುಮಾರ ಧೋಖ
ಯಾದಗಿರಿ : ಜೂ, 29: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತಾಗಬೇಕು ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶ್ರೇಣಿಕ ಕುಮಾರ ಧೋಖ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರ ಸಭೆ ನಡೆಸಿ ಅವರು ಮಾತನಾಡಿದರು.
ಅನುಷ್ಠಾನ ಸಮಿತಿಯ ಕಾರ್ಯಕರ್ತರು ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಯೋಜನೆ ತಲುಪಿದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ತಾಂತ್ರಿಕ ಸಮಸ್ಯೆಯಿಂದ ಯೋಜನೆಯ ಸದುಪಯೋಗ ಪಡೆಯದ ಜನರ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಯೋಜನೆ ಮುಟ್ಟುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆ
ಪ್ರತಿ ತಿಂಗಳು ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯನ್ನು ಹೊಂದಿರುವ ಫಲಾನುಭವಿಗಳಿಗೆ ಪ್ರತಿ ಕಾರ್ಡಗೆ 35 ಕೆ.ಜಿ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ 5 ಕೆ.ಜಿ ಆಹಾರಧಾನ್ಯ ಜೊತೆಗೆ 5 ಕೆ.ಜಿ ಆಹಾರಧಾನ್ಯ ಬದಲಾಗಿ ರೂ.170/-ಗಳನ್ನು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣವನ್ನು ವರ್ಗಾಯಿಸಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಆಹಾರಧಾನ್ಯದ ಜೊತೆಗೆ ಪ್ರತಿ ಫಲಾನುಭವಿಗೆ ರೂ.170/- ನೇರ ನಗದು ವರ್ಗಾವಣೆ ಯೋಜನೆಯು ಜುಲೈ-2023ರ ತಿಂಗಳನಿಂದ ಪ್ರಾರಂಭವಾಗಿದ್ದು, ತಿಂಗಳವಾರು ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾದ ಫಲಾನುಭವಿಗಳ ವಿವರ ಈ ಕೆಳಗಿನಂತಿದೆ. ಜೂಲೈ-2023 ರಿಂದ ಎಪ್ರಿಲ್-2024 ರ ಅಂತ್ಯದವರೆಗೆ ಒಟ್ಟು ಪಡಿತರ ಚೀಟಿ 269529 ಒಟ್ಟು ಪಡಿತರ ಚೀಟಿ ಸದಸ್ಯರ ಸಂಖ್ಯೆ 999925 ಹಣ ವರ್ಗಾವಣೆಯಾದ ಫಲಾನುಭವಿಗಳ ಸಂಖ್ಯೆ 232093 ಇದ್ದು ಒಟ್ಟು ಪಾವತಿಸಿದ ಮೊತ್ತ 1,41,21,20,780 ರೂಪಾಯಿ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದರು.
ಸ್ತ್ರೀ ಶಕ್ತಿ ಯೋಜನೆ; ಸ್ತ್ರೀಶಕ್ತಿ ಯೋಜನೆಯಡಿಯಲ್ಲಿ ದಿನಾಂಕ 26.05.2024 ರಿಂದ 01.06-2024ರ ವರೆಗೆ ರಾಜ್ಯದ ಮಹಿಳೆಯರು ಕಕರಸಾ ನಿಗಮ ಯಾದಗಿರಿ ವಿಭಾಗದ ಬಸ್ ಗಳಲ್ಲಿ ಪ್ರಯಾಣಿಸಿದ ಹಾಗೂ ಸಾರಿಗೆ ಆದಾಯದ ವಿವರವು, ಯಾದಗಿರಿ ಘಟಕದ ಯಾದಗಿರಿ ಶಹಾಪೂರ ಗುರುಮಿಠಕಲ್, ಸುರಪೂರ ಮಹಿಳೆಯರು 2,43,79, 633 , ಮಕ್ಕಳು 8,58,302 ಸೇರಿ ಒಟ್ಟು 2,52,37,935 ಫಲಾನುಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಗೃಹಜ್ಯೋತಿ ಯೋಜನೆ
ಒಟ್ಟು ಸ್ಥಾವರಗಳು 154065 ಇದ್ದು ನೋಂದಣಿಯಾದ ಸ್ಥಾವರಗಳು 145821 ಆಗಿದ್ದು ಶೇಕಡಾವಾರು 94 ರಷ್ಟು ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ;
ಆಗಸ್ಟ್ 2023 ರಿಂದ ಮೇ 2024 ರ ವರೆಗೆ ಒಟ್ಟು ನೋಂದಣಿ 245039 ಆಗಿದ್ದು, 194039 ಫಲಾನುಭವಿಗಳಿಗೆ ಜಮಾ ಆಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಯುವ ನಿಧಿ ಯೋಜನೆ;
ಯುವನಿಧಿ ಯೋಜನೆಯ ಅರ್ಹ ಅಭ್ಯರ್ಥಿಗಳಿಗೆ ಸೇವಾ ಸಿಂಧುಪೆÇೀರ್ಟಲ್ ನ ಅರ್ಜಿ ಆಹ್ವಾನಿಸಿ ಸರ್ಕಾರದಿಂದ ದಿನಾಂಕ:26-12-2023 ರಂದು ವಿದ್ಯುಕ್ತವಾಗಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿರುತ್ತದೆ. ಇಲ್ಲಿಯವರೆಗೆ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 4510 ಅರ್ಜಿಗಳು ಸ್ವೀಕೃತವಾಗಿರುತ್ತದೆ. ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಖಾರಿಯವರು ಮಾತನಾಡಿ ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಹಂತಹಂತವಾಗಿ ಅದರ ಸದುಪಯೋಗ ಪಡೆಯುವ ಬಗೆಯನ್ನು ಸಭೆಯಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿಗಳಾದ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಉಪಾಧ್ಯಕ್ಷರಾದ ಸ್ಯಾಮ್ಸನ್ ಮಾಳಿಕೇರಿ, ಬಸವರಾಜ ಬಿಳ್ಹಾರ, ರಮೇಶ ದೊರೆ, ವೀರಭದ್ರಪ್ಪ ಯಡ್ಡಳ್ಳಿ, ಹಳ್ಳೆಪ್ಪ ಹವಾಲ್ದಾರ್, ಯಾದಗಿರಿ ತಾಲೂಕು ಅಧ್ಯಕ್ಷ ಬಸವರಾಜಪ್ಪ ಬಂಗಾಲಿ ರಾಮಸಮುದ್ರ, ಶಹಾಪುರ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಸುರಪುರ ಅಧ್ಯಕ್ಷ ಬಸಲಿಂಗಪ್ಪ ಬಾದ್ಯಪುರ, ಹುಣಸಗಿ ಅಧ್ಯಕ್ಷ ಕೃಷ್ಣ ಹೆಚ್ ಜಾಧವ್, ವಡಿಗೇರಾ ಅಧ್ಯಕ್ಷ ಖಾಜಾ ಮೈನುದ್ದೀನ್ ಮಿರ್ಚಿ ನಾಯ್ಕಲ್, ಗುರುಮಿಠಕಲ್ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.