ಆಸ್ಪಲ್ಲಿಯವರು ಶಿಕ್ಷಣ ಪ್ರೇಮಿಗಳಾಗಿದ್ದರು:ಬೆಳಗುಂದಿ
ಸೈದಾಪುರ:ಜೂ.29:ಸರಳ, ಸಜ್ಜನಿಕೆಯ ವ್ಯಕಿತ್ವ ಹೊಂದಿದ್ದ ಸಂಗಣ್ಣ ಆಸ್ಪಲ್ಲಿಯವರು ಸಮಾಜ ಸೇವಕರು ಹಾಗೂ ಶಿಕ್ಷಣ ಪ್ರೇಮಿಗಳಾಗಿದ್ದರು ಎಂದು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಸ್ಥೆಯ ಆವರಣದಲ್ಲಿ ಮಾಜಿ ಕಾರ್ಯದರ್ಶಿ, ಶಿಕ್ಷಣ ಪ್ರೇಮಿ ದಿವಂಗತ ಸಂಗಣ್ಣ ಆಸ್ಪಲ್ಲಿ ಅವರ 32ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಡಿ ಗ್ರಾಮೀಣ ಭಾಗದಲ್ಲಿ ಹಿರಿಯರು ಸೇರಿಕೊಂಡು ಉತ್ತಮ ಸಂಸ್ಥೆಯನ್ನು ರಚನೆ ಮಾಡಿದರು. ಇಂದು ಇಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತಾಗಿದೆ. ಸಂಗಣ್ಣ ಆಸ್ಪಲ್ಲಿ ಹಾಗೂ ವಿವಿಧ ಗ್ರಾಮಗಳ ಹಿರಿಯ ಮುಖಂಡರ ಪ್ರಯತ್ನ ಬಹಳ ಮುಖ್ಯವಾಗಿದ್ದೂ ಅವರುಗಳಲ್ಲಿನ ಶೈಕ್ಷಣಿಕ ಸೇವಾ ಮನೋಭಾವನೆಯ ಗುಣಗಳು ನಮಗೆ ಮಾದರಿಯಾಗಬೇಕು ಎಂದು ಹೇಳಿದರು.
ಸಂಗಣ್ಣ ಆಸ್ಪಲ್ಲಿಯವರು ದೂರ ದೃಷ್ಟಿಹೊಂದಿದ ವ್ಯಕ್ತಿಗಳಾಗಿದ್ದರೂ. ಅವರ ವಿಚಾರಧಾರೆಗಳು ನಮಗೆ ಮಾದರಿಯಾಗಬೇಕು. ವೈಯಕ್ತಿಕ ಬದುಕಿನ ಜೊತೆಗೆ ಸಾಮಾಜಿಕ ಸೇವೆಯಲ್ಲಿ ನಾವು ತೊಡಗಿಸಿಕೊಂಡಾಗ ನಮ್ಮ ಮಹತ್ವ ಹೆಚ್ಚಾಗುತ್ತದೆ. ಈ ದಿಸೆಯಲ್ಲಿ ಆಸ್ಪಲ್ಲಿಯವರ ವ್ಯಕ್ತಿತ್ವದ ಜೀವನಾದರ್ಶಗಳು ಅತಿ ಶ್ರೇಷ್ಟವಾಗಿವೆ.
ಶ್ರೇಣಿಕುಕುಮಾರ ದೋಕ ಶಿಕ್ಷಣ ಪ್ರೇಮಿಗಳು ಸೈದಾಪುರ