ಮೂರು ವರ್ಷಗಳಿಂದ ಪಿಂಚಣಿ ಹಣಕ್ಕಾಗಿ ಅಂಧವ್ಯಕ್ತಿ ಅಲೆದಾಟ
ಮಡಿವಾಳಪ್ಪ ಟಿ ಯತ್ನಾಳ
ಯಡ್ರಾಮಿ,ಸೆ 26:ಸತತವಾಗಿ ಮೂರು ವರ್ಷಗಳಿಂದ ಅಂಧ ವ್ಯಕ್ತಿಯೊಬ್ಬರು ಪಿಂಚಣಿ ಹಣಕ್ಕಾಗಿ ಕುಟುಂಬದ ಸಮೇತವಾಗಿ ಯಡ್ರಾಮಿ ತಹಶೀಲ್ ಕಚೇರಿಗೆ ಅಲೆದಾಡುತ್ತಿದ್ದು, ತಹಸೀಲ್ದಾರ ಅವರ ಮುಂದೆ ಕುಟುಂಬದ ಸದಸ್ಯರು ಪಿಂಚಣಿ ನೀಡದೆ ಹೋಗುವದಿಲ್ಲ ಎಂದು ಪಟ್ಟು ಹಿಡಿದ ಘಟನೆ ನಡೆದಿದೆ.
ತಾಲ್ಲೂಕಿನ ಕಾಖಂಟಗಿ ಗ್ರಾಮದ ರಾಜಕುಮಾರ ರಾಮಚಂದ್ರ ರಾಠೋಡ ಎಂಬ ಅಂಧ ವ್ಯಕ್ತಿ ತಮ್ಮ ಹೆಂಡತಿ ಮಕ್ಕಳ ಸಮೇತವಾಗಿ ಬಂದು ತಹಸೀಲ್ದಾರ ಅವರ ಮುಂದೆ ಕುಳಿತು ಪಿಂಚಣಿ ನೀಡಿ,ಇಲ್ಲದಿದ್ದರೆ ನನ್ನ ಆರೋಗ್ಯದ ವೆಚ್ಚ ಭರಿಸಬೇಕು ಎಂದು ಪಟ್ಟು ಹಿಡಿದರು.
ನನ್ನ ಕೈಯಿಂದ ಎನು ಮಾಡಲು ಸಾಧ್ಯ ಇಲ್ಲ. ಈಗಾಗಲೇ ಲೋಕಾಯುಕ್ತ ತನಿಖೆ ಇದ್ದು ಎನೂ ಮಾಡಲು ಬರುವುದಿಲ್ಲ ಎಂದು ತಹಸೀಲ್ದಾರರು ಉತ್ತರ ನೀಡಿದ್ದಾರೆ ಎಂದು ಆರೋಪಿಸಿದರು.
ನಾನು ಕುರುಡ ವ್ಯಕ್ತಿ ಮೂರು ವರ್ಷಗಳಿಂದ ಹೆಂಡತಿ ಮತ್ತು ಮಕ್ಕಳ ಸಮೇತವಾಗಿ ಸುತ್ತಾಡುತ್ತಿದ್ದು,ಪ್ರತಿದಿನ ಬಂದರೂ ಕೂಡ ನಾಳೆ ಬಾ ಮುಂದಿನ ವಾರ ಬಾ ಎಂದು ಹೇಳುತ್ತಾರೆ.ಇವತ್ತು ತಹಸೀಲ್ದಾರ ಅವರ ಮುಂದೆ ಕುಟುಂಬದ ಸಮೇತವಾಗಿ ಕುಳಿತರೂ ಪ್ರಯೋಜನ ಆಗಿಲ್ಲ. ಅವರು ಇದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಾನು ಕುರುಡ ವ್ಯಕ್ತಿ. ನನ್ನ ಹೆಂಡತಿ ಅವಿದ್ಯಾವಂತೆ. ಎಲ್ಲಿ ನ್ಯಾಯ ಕೇಳಬೇಕು ಎಂದು ಅಳಲು ತೊಡಿಕೊಂಡರು.
ಈಗಾಗಲೇ ತಾಲ್ಲೂಕಿನಲ್ಲಿ ಸಾವಿರಾರು ಬೊಗಸ್ ಪಿಂಚಣಿ ನೀಡಲಾಗಿದೆ ಎಂದು ಲೋಕಾಯುಕ್ತ ತನಿಖೆ ನಡೆಯುತ್ತಿದೆ ಎಂದು ತಹಸೀಲ್ದಾರ ಉತ್ತರವಾಗಿದೆ.
ಪ್ರತಿದಿನ ತಾಲ್ಲೂಕಿನ 63 ಹಳ್ಳಿಗಳಿಂದ ಸಾವಿರಾರು ಅಂಗವಿಕಲರು ವಯೋವೃದ್ಧರು ಪಿಂಚಣಿ ಹಣ ಬಂದ್ ಆಗಿದೆ ಎಂದು ಸುತ್ತಾಡುತ್ತಿದ್ದಾರೆ.
ಭೋಗಸ್ ಪಿಂಚಣಿ ಪಡೆಯುತ್ತಿರುವರು ಪಡೆಯುತ್ತಿದ್ದಾರೆ.ಇದಕ್ಕೆ ಜಿಲ್ಲಾಧಿಕಾರಿಗಳು ಭೋಗಸ್ ಪಿಂಚಣಿ ಬಂದ್ ಮಾಡಿ ನಿಜವಾದ ಪಿಂಚಣಿ ಪಡೆಯುವ ಹಕ್ಕುದಾರರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.
ತಹಸೀಲ್ದಾರ ಸಿಬ್ಬಂದಿವರ್ಗ ಸುಮಾರು 12 ಘಂಟೆಗೆ ಬರುತ್ತಾರೆ 4 ಘಂಟೆಗೆ ಹೋಗುತ್ತಾರೆ ಯಾರಾದರೂ ಕೇಳಿದರೆ ನಮ್ಮ ಬಸ್ ವ್ಯವಸ್ಥೆ ಇಲ್ಲ ಎನ್ ಮಾಡಬೇಕು ಎಂದು ಉತ್ತರ ನೀಡುತ್ತಾರೆ.ಯಡ್ರಾಮಿ ತಹಸೀಲ್ದಾರ ಸಿಬ್ಬಂದಿವರ್ಗಕ್ಕೆ ಬಯೋಮೇಟರ್ ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯಡ್ರಾಮಿ ತಾಲ್ಲೂಕಿನಲ್ಲಿ ಹಲವಾರು ಭೋಗಸ್ ಪಿಂಚಣಿ ಆಗಿರುವುದರಿಂದ ತನಿಖೆ ವೇಳೆಯಲ್ಲಿ ನಿಜವಾದ ಪಿಂಚಣಿ ಕಟ್ ಆಗಿದೆ. ಇದಕ್ಕೆ ಪರಿಹಾರ ತನಿಖೆ ಮುಗಿಯುವ ತನಕ ಹೀಗೆ ಇರುತ್ತದೆ.
ಶಶಿಕಲಾ ಪಾದಗಟ್ಟಿ ತಹಸೀಲ್ದಾರ ಯಡ್ರಾಮಿ.
ಸುಮಾರು ಮೂರೂ ವರ್ಷಗಳಿಂದ ಅಂಧರ ಪಿಂಚಣಿ ಹಣ ಪಡೆಯಲು ಎಲ್ಲಾ ದಾಖಲೆ ಹಿಡ್ಕೊಂಡು ಸುತ್ತಾಡಿದರೂ ನಾಳೆ ಮುಂದಿನ ವಾರ ಎಂದು ಹೇಳುತ್ತಾರೆ ಎನ್ ಮಾಡಬೇಕು ಎಲ್ಲಿಗೆ ಹೋಗಬೇಕು.
ರಾಜಕುಮಾರ ರಾಮಚಂದ್ರ ರಾಠೋಡ ಕಾಖಂಟಗಿ ಗ್ರಾಮ
ಒಂದು ವರ್ಷ ಹೆಚ್ಚು ಆಗಿದೆ ರೀ ನನ್ನ ರೊಕ್ಕ ಕಟ್ ಆಗಿವೆ. ಎಲ್ಲಾ ಕಾಗದ ಕೊಟ್ಟರು ನಾಳೆ ಎಂದು ಹೇಳುತ್ತಾರೆ. ಎಷ್ಟು ನಾಳೆ ಬರಬೇಕು ಹೇಳ್‍ರಿ.
ನೀಲಮ್ಮ ಗಂಡ ಈರಪ್ಪ ಗೆಜ್ಜಿ ಯಡ್ರಾಮಿ ನಿವಾಸಿ.