ಮಹಾದೇವಿ ಕೆ.ಬಂಧುಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ
ಕಮಲಾಪೂರ,ಸೆ.26-ಪಟ್ಟಣದಲ್ಲಿ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ತಾಲ್ಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ ಸಮಾರಂಭದಲ್ಲಿ ವಿ.ಕೆ.ಸಲಗರ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಮಹಾದೇವಿ .ಕೆ. ಬಂಧು, ದತ್ತಾತ್ರೇಯ ಶೇಖರ, ಗೌತಮ ಕಿವುಡೆ, ಪಂಚಶೀಲ ಮೋರೆ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಂತವೀರ ದೇವರೂ, ಶಾಸಕ ಬಸವರಾಜ ಮತ್ತಿಮೂಡ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ, ಡಾ.ಶಾಂತಾಬಾಯಿ ಬಿರಾದಾರ, ಪರಮೇಶ್ವರ ಓಕಳಿ, ರೋಹಿದಾಸ ಸೂರ್ಯವಂಶಿ, ಸೋಮನಗೌಡ ವಿಟ್ಲಾಪೂರ, ನಿವೃತ್ತ ಬಿ.ಇಓ ಭರತರಾಜ ಸಾವಳಗಿ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹರ್ಷ: ಮಹಾದೇವಿ ಕೆ.ಬಂಧು ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದುದಕ್ಕೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ರಾಮಪ್ಪ ಯರಕ್ಯಾಳ, ಕಿಶನರಾವ ಡೊಬಳೇಕರ, ಬಾಲಾಜಿ, ಕವಿತಾ, ದೀಪಾ,ಶೋಭಾ, ಚಂದ್ರಕಾ, ಅಂಜುಮ ಫಾತಿಮಾ, ಪ್ರಗತಿ, ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ವಿದ್ಯಾರ್ಥಿ ಬಳಗ ಹರ್ಷ ವ್ಯಕ್ತಪಡಿಸಿದೆ.