ಜೀವನದುದ್ದಕ್ಕೂ ಕನ್ನಡವೇ ಉಸಿರಾಗಿಸಿಕೊಂಡ ಡಾ. ಜಯದೇವಿ ತಾಯಿ ಲಿಗಾಡೆ: ಪಟ್ಟದ್ದೇವರು
ಬಸವಕಲ್ಯಾಣ: ಜೂ.29:ತಮ್ಮ ಜೀವನದುದ್ದಕ್ಕೂ ಕನ್ನಡವೇ ಉಸಿರಾಗಿಸಿಕೊಂಡಿದ್ದ ಡಾ. ಜಯದೇವಿ ತಾಯಿ ಲಿಗಾಡೆ ಅವರು ಕನ್ನಡ ಮೇಲೆ ಅಪಾರವಾದ ಪ್ರೀತಿ, ಅಭಿಮಾನ ಹೊಂದಿದ್ದ ಕನ್ನಡದ ಮಹಾ ಚೇತನ ಎಂದು ಇಲ್ಲಿಯ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷರಾದ ನಾಢೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ಇಲ್ಲಿಯ ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪದಿಂದ ಅನುಭವ ಮಂಟಪದ ಪರಿಸರದಲ್ಲಿಯ ಭಕ್ತಿ ಭವನದ ಬಳಿ ಶುಕ್ರವಾರ ಆಯೋಜಿಸಲಾಗಿದ್ದ ಡಾ. ಜಯದೇವಿತಾಯಿ ಲಿಗಾಡೆ ಅವರ 113ನೇ ಜಯಂತಿ ಹಾಗೂ ಡಾ. ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬಸವಣ್ಣನವರ ಸಾಹಿತ್ಯವನ್ನು, ಕನ್ನಡದ ವಚನಗಳನ್ನು ಮೊಟ್ಟ ಮೊದಲು ಮರಾಠಿ ಭಾಷೆಗೆ ಅನುವಾದಿಸಿ ಮಹಾರಾಷ್ಟ್ರದ ಜನರಿಗೆ ಪರಿಚಯಿಸಿದ ಶ್ರೇಯಸ್ಸು ಡಾ. ಜಯದೇವಿ ತಾಯಿ ಲಿಗಾಡೆ ಅವರಿಗೆ ಸಲ್ಲುತ್ತದೆ ಎಂದರು.
ಡಾ. ಜಯದೇವಿತಾಯಿ ಅವರು ಕನ್ನಡದ ಮಹಾ ಚೇತನ. ಬಸವಣ್ಣನವರ ಸಮಗ್ರ ವಚನವನ್ನು ಅವರು ಕನ್ನಡದಲ್ಲಿ ಅನುವಾದ ಮಾಡಿದ್ದರು. ಕನ್ನಡ ಬಸವಣ್ಣ ಹಾಗೂ ಸಿದ್ದರಾಮೇಶ್ವರರು ಅವರ ಹೃದಯದಲ್ಲಿದ್ದರು. ಉತ್ಕøಷ್ಠವಾದ ಸಾಹಿತ್ಯ, ಅದ್ಭುತವಾದ ಮಾತಿನ ಮೋಡಿ ಅವರಿಗೆ ಸಿದ್ಧತಿಸಿತ್ತು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಅಂದು ಮಾಡಿದ ಭಾಷಣ ಅದ್ಭುತ ಹಾಗೂ ಸ್ಪೂರ್ತಿದಾಯಕವಾಗಿತ್ತು ಎಂದು ತಿಳಿಸಿದರು.
ಉದ್ಘಾಟನೆ ನೆರವೇರಿಸಿದ ಅನುಭವ ಮಂಟಪ ಟ್ರಸ್ಟ್ ಸದಸ್ಯ ಕುಪೇಂದ್ರ ಪಾಟೀಲ್ ಮಾತನಾಡಿ, ಕನ್ನಡ ನಾಡು, ನುಡಿ, ಸಾಹಿತ್ಯ ಕ್ಷೇತ್ರಕ್ಕೆ ಜಯದೇವಿ ತಾಯಿ ಲಿಗಾಡೆ ಅವರ ಕೊಡುಗೆ ದೊಡ್ಡದು. ಸೊಲ್ಲಾಪುರನಲ್ಲಿ ಜನಿಸಿದರು ಸಹ ಬಸವಣ್ಣ ಮತ್ತು ಕಲ್ಯಾಣದ ಬಗ್ಗೆ ಅವರಿಗೆ ಅಪಾರವಾದ ಅಭಿಮಾನ ಮತ್ತು ಕಾಳಜಿ ಇತ್ತು ಎಂದು ಹೇಳಿದರು
ಹುಬ್ಬಳಿಯ ಪೂಜ್ಯ ಅಕ್ಕನಾಗಮ್ಮ ತಾಯಿ ಮಾತನಾಡಿ, ಕನ್ನಡ ನಾಡಿಗೆ ಅಮೂಲ್ಯವಾದ ಕೊಡುಗೆ ನೀಡಿದ ಮಹಾತಾಯಿ ಜಯದೇವಿ ತಾಯಿ. ಅವರ ವ್ಯಕ್ತಿತ್ವ, ಸೇವೆ ಮತ್ತು ಕೊಡುಗೆ ಸ್ಮರಣೀಯ ಎಂದು ವಿಶ್ಲೇಷಿಸಿದರು. ಸೋನಲ್ ವಿಜಯಸಿಂಗ್ ಮಾತನಾಡಿ, ಜಯದೇವಿತಾಯಿ ಲಿಗಾಡೆ ಅವರು ಕನ್ನಡ ನಾಡಿಗೆ ನೀಡಿದ ಕೊಡುಗೆ ಅನನ್ಯ. ಅವರು ಬದುಕು, ಬರಹ ಮತ್ತು ಸಾಧನೆ ಅನುಕರಣೀಯ ಮತ್ತು ಸ್ಪೂರ್ತಿದಾಯಕವಾಗಿದೆ ಎಂದರು.
ಸಮಾರಂಭದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರ ಸ್ವೀಕರಿದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ರಜಿಯಾ ಬಳಬಟ್ಟೆ, ಸಾನ್ನಿಧ್ಯ ವಹಿಸಿದ ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿದರು. ಜಗದೇವಿತಾಯಿ ಲಿಗಾಡೆ ಅವರ ಜೀವನ, ಸಾಧನೆ ಮತ್ತು ಕೊಡುಗೆ ಕುರಿತು ಸುಮಿತ್ರಾ ಡಾವರಗಾಂವ ಉಪನ್ಯಾಸ ನೀಡಿದರು.
ಅನುಭವ ಮಂಟಪ ಟ್ರಸ್ಟ್ ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟಿ, ಕಾರ್ಯದರ್ಶಿ ಡಾ.ಎಸ್.ಬಿ.ದುರ್ಗೆ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ, ನಾರಾÀಣಖೇಡನ ವಿರುಜಾ ಮಲ್ಲಿಕಾರ್ಜುನ, ನ್ಯಾಯವಾದಿ ಚೇತನಾ ಪಾಟೀಲ್, ಪ್ರಮುಖರು, ಲಿಗಾಡೆ, ಮೂಗಿ ಪರಿವಾರದ ಸದಸ್ಯರು ಉಪಸ್ಥಿತರಿದ್ದರು. ಸಾಹಿತಿ ವಿಶ್ವನಾಥ ಮುಕ್ತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜಕುಮಾರ ಹೂಗಾರ ವಚನ ಗಾಯನ ನಡೆಸಿಕೊಟ್ಟರು.
ಡಾ.ಜಯದೇವಿತಾಯಿ ಲಿಗಾಡೆ ಅವರು ನಾಡು ಕಂಡ ವೀರ ಮಹಿಳೆ, ಕನ್ನಡ ಸಾರತ್ವತ ಲೋಕಕ್ಕೆ ಅವರ ಕೊಡುಗೆ ಅನನ್ಯ. ತಮ್ಮ ಇಡೀ ಸಂಪತ್ತು ಸಮಾಜಕ್ಕೆ ಅರ್ಪಿಸಿದ ಮಹಾತಾಯಿ. ಅವರ ತತ್ವ, ಆದರ್ಶಗಳನ್ನು ಅರಿತು ತನು, ಮನ ಭಾವದಲ್ಲಿ ಅಳವಡಿಸಿಕೊಂಡರೆ ಬದುಕು ಸಾಥರ್Àವಾಗುತ್ತದೆ
ಸಾಹಿತಿ ರಜಿಯಾ ಬಳಬಟ್ಟೆ ಅವರಿಗೆ ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರ
ಇಲ್ಲಿಯ ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪದ ವತಿಯಿಂದ ಕೊಡಲಾಗುವ ಡಾ.ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರವನ್ನು ಸಾಹಿತಿ, ಕವಯತ್ರಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ರಜಿಯಾ ಬಳಬಟ್ಟೆ ಅವರಿಗೆ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಜಯದೇವಿತಾಯಿ ಲಿಗಾಡೆ ಅವರ 113ನೇ ಜಯಂತಿ ಹಾಗೂ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ಬಳಬಟ್ಟೆ ಅವರಿಗೆ ಅವರಿಗೆ ಶ್ರೀ ಡಾ.ಬಸವಲಿಂಗ ಪಟ್ಟದೇವರು ಸಾನ್ನಿಧ್ಯದಲ್ಲಿ ಪುರಸ್ಕಾರ ಪ್ರದಾನ ಮಾಡಿದರು. ಪುರಸ್ಕಾರ ಪುರಸ್ಕøತ ಬಳಬಟ್ಟೆ ಅವರು ಮಾತನಾಡಿ, ಪ್ರಶಸ್ತಿ ನೀಡಿರುವದಕ್ಕೆ ಧನ್ಯತಾ ಭಾವ ವ್ಯಕ್ತಪಡಿಸಿದರು.