ಗ್ರಂಥಾಲಯ ನಿರ್ಮಾಣಕ್ಕೆ ಭೂಮಿಪೂಜೆ
ಗುಳೇದಗುಡ್ಡ,ಜೂ.29: ಸಮೀಪದ ಹಂಗರಗಿ ಗ್ರಾಮದ ಪಂಚಾಯತಿ ಆವರಣದಲ್ಲಿ 2022-23ನೇ ಸಾಲಿನ ತಾಲೂಕು ಪಂಚಾಯಿತಿ ಅನಿರ್ಭಂದಿತ ಅನುದಾನದಡಿಯಲ್ಲಿ ನೂತನ ಗ್ರಾಮಪಂಚಾಯತ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ತಾಪಂ ಇಓ ಮಲ್ಲಿಕಾರ್ಜುನ ಬಡಿಗೇರ, ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಪಾರ್ದಿ, ಸದಸ್ಯರಾದ ಮಲ್ಲಪ್ಪ ಕುರಿ, ಫಕೀರಪ್ಪ ಉಗಲವಾಟ, ಹನಮಂತ ಬಳೇಕಲ್ಲ, ಸೈಯದಸಲಿಂ ಖಾಜಿ, ಭೀಮವ್ವ ಹಾನಾಪೂರ, ಶೇಖಪ್ಪ ಉಡಚಂಚಿ, ರಂಗಪ್ಪ ಯಡಹಳ್ಳಿ, ಪ್ರಮೋದ ಕವಡಿಮಟ್ಟಿ, ತುಳಿಸಿಗೇರವ್ವ ಮೊಕಾಶಿ, ಶಂಕ್ರಪ್ಪ ಹೊಸಗೌಡ್ರ, ಬಸವರಾಜ ಹಾನಾಪೂರ, ಮಲ್ಲಿಕಾರ್ಜುನ ಮೇಟಿ, ನಿಂಗಪ್ಪ ಕಂಬಳಿ, ವಿಠ್ಠಲ ಗೂಳನ್ನವರ, ಪಿಡಿಓ ಲಕ್ಷ್ಮಣ ಶಾಂತಗೇರಿ, ಎನ್‍ಆರ್‍ಜಿ ಸಹಾಯಕ ನಿರ್ದೇಶಕ ರಾಮಚಂದ್ರ ಮೇತ್ರಿ ಮತ್ತಿತರರು ಇದ್ದರು.