ಆಳಂದ ಪುರಸಭೆ ಆಡಳಿತ ಹುದ್ದೆಗಳೆಲ್ಲ ಖಾಲಿ ಖಾಲಿ: ರಸ್ತೆ ಜಾಮ್ರಸ್ತೆಯ ಮೇಲೆ ವ್ಯಾಪಾರ ವಹಿವಾಟು ಸಂಚಾರಕ್ಕೆ ಪರದಾಟ: ಸಿಂಹ ನಿದ್ರೆಯಲ್ಲಿ ಆಡಳಿತ
ಆಳಂದ:ಜೂ.29: ತಾಲೂಕು ಕೇಂದ್ರ ಆಳಂದ ಪಟ್ಟಣದ ಪುರಸಭೆಗೆ ಮುಖ್ಯಾಧಿಕಾರಿ ಸೇರಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳು ಖಾಲಿ ಖಾಲಿಯಾಗಿದ್ದರಿಂದ ತಮ್ಮ ಅರ್ಜಿಗಳ ವಿಲೆವಾರಿ ಆಗದೇ ಜನ ಸಾಮಾನ್ಯರು ಪರದಾಡತೊಡಗಿದ್ದಾರೆ.
ಅಲ್ಲದೆ, ರಸ್ತೆ ಮುಖ್ಯರಸ್ತೆಗಳಲ್ಲಿ ಸುಗಮ ಸಂಚಾರ ಸಂಕಷ್ಟದಿಂದ ಕೂಡಿದೆ. ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಮುಖ್ಯಾಧಿಕಾರಿಯಾಗಿದ್ದ ಶಂಭುಲಿಂಗ ಕಣ್ಯೆ ಅವರು ವರ್ಗಾವಣೆಯಾಗಿದ್ದ ಮತ್ತೊಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿತ್ತಾದರು ಲೋಕಸಭಾ ಚುನಾಅವಣೆ ಮುಗಿದ ಬಳಿಕ ಈ ಅಧಿಕಾರಿಗಳು ತಮ್ಮ ಮೂಲ ಸ್ಥಾನಕ್ಕೆ ತೆರಳಿದ್ದರಿಂದ ಇಲ್ಲಿ ಖಾಲಿಯಾದ ಮುಖ್ಯಾಧಿಕಾರಿ ಹುದ್ದೆಗೆ ಮೊದಲಿದ್ದ ಶಂಭುಲಿಂಗ ಅವರು ಬೇರಡೆ ಹೋಗಿದ್ದು, ಇಲ್ಲಿಗೆ ಹೊಸ ಮುಖ್ಯಾಧಿಕಾರಿ ನೇಮಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲಿದೆ.
ಮೇಲಾಗಿ ರಾಜ್ಯದಲ್ಲಿ ತೆರವಾಗಿರುವ ವಿವಿಧ ನಗರಸಭೆ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮುಂದಿನ ಎರಡೂವರೆ ವರ್ಷದ ಅವಧಿಯ ಮೀಸಲಾತಿ ಘೋಷಣೆ ಮಾಡದೇ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಅದರಂತೆ ಸ್ಥಳೀಯ ಪುರಸಭೆಗೂ ಹೊಸ ಮೀಸಲಾತಿ ಬರುವವರೆಗೂ ಇನ್ನೂ ಕೆಲವು ದಿನಗಳು ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿವೆ.
ಈಗಾಗಲೇ ಕಳೆದ ಮೇ ತಿಂಗಳಲ್ಲಿ ಸಹಾಯಕ ಆಯುಕರನ್ನ್ತು ಪುರಸಭೆಯ ಆಡಳಿತಾಧಿಕಾರಿಗಳನ್ನಾಗಿ ಸರ್ಕಾರ ನೇಮಿಸಿದೆ. ಕಳೆದ ಎರಡು ತಿಂಗಳುಗಳ ಮುಂಚೆ ರಾಜ್ಯದ ಕೆಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೊದಲನೇ ಅವಧಿ ಆಡಳಿತ ಎರಡೂವರೆ ವರ್ಷ ಈಗಾಗಲೇ ಮುಗಿದಿದೆ.
ಇನ್ನುಳಿದ ಎರಡೂವರೆ ವರ್ಷದ ಅವಧಿಗೆ ತಕ್ಷಣದಲ್ಲಿ ಪುರಸಭೆ ಕಾಯ್ದೆ, ಕಾನೂನು ಪ್ರಕಾರ ರೊಟೇಷನ್ ಪದ್ದತಿಯಂತೆ ಸರ್ಕಾರ ಮೀಸಲಾತಿ ಘೋಷಣೆ ಮಾಡಿದರೆ, ಆ ಸ್ಥಾನಗಳಿಗೆ ಚುನಾವಣೆ ನಡೆದು ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ತುಂಬಬಹುದು. ಆಡಳಿತಾಧಿಕಾರಿ ನೇಮಕ ಮಾಡಿರುವುದರಿಂದ ಪುರಸಭೆ ಸದಸ್ಯರು ಸಾಮಾನ್ಯ ಸಭೆ ನಡೆಯುತ್ತಿಲ್ಲ. ಯಾವುದೇ ಹೊಸ ಕ್ರಿಯಾ ಯೋಜನೆ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಸನ ಖಾಲಿ ಉಳಿದು ಅವರ ಕಚೇರಿಯ ಬಾಗಿಲು ಮುಚ್ಚಿದೆ. ಅಲ್ಲದೇ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಇಲ್ಲದೇ ಪುರಸಭೆಯ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರೀಯವಾಗಿದೆ. ಅಲ್ಲದೇ ಪುರಸಭೆಗೆ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದ್ದು ಜನರ ಕುಂದುಕೊರತೆಗಳಿಗೆ ಸ್ಪಂದನೆಯಿಲ್ಲದ ಪರಿಸ್ಥಿತಿ ವಿಪರ್ಯಾಸವಾಗಿ ಮಾರ್ಪಟ್ಟಿದೆ.
ರಸ್ತೆಯ ಮೇಲೆ ವ್ಯಾಪಾರ:
ಪ್ರದೇಶದಲ್ಲಿ ರಸ್ತೆಯಲ್ಲಿ ತಳ್ಳುಗಾಡಿ, ಮಾರುಕಟ್ಟೆ ರಸ್ತೆಯಲ್ಲಿ ಬೀದಿ ವ್ಯಾಪಾರಿಗಳ ಬೀಡುಬಿಟ್ಟಿದ್ದರಿಂದ ಸುಗಮ ಸಂಚಾರವಿಲ್ಲದೆ ಪರದಾಡುವಂತಾಗಿದೆ. ದ್ವಿಚಕ್ರ ವಾಹನಕ್ಕೂ ಜನರು ನಡೆದು ಹೋಗಲು ಸಹ ಆಗದಷ್ಟು ದಣ್ಣೆಯಾಗಿ ದಿನವೀಡಿ ಜನ ಸಾಮಾನರು ಪರದಾಡುವಂತಾಗಿದೆ. ಮಾರುಕಟ್ಟೆ ರಸ್ತೆ ಹಾಗೂ ಬಸ್ ನಿಲ್ದಾಣ ಮುಂಭಾಗದಲ್ಲಿ ತಳ್ಳುಗಾಡಿ ವ್ಯಾಪಾರಿಗಳು ಹೆದ್ದಾರಿಯ ಮೇಲೆ ಠಿಕಾಣಿಹೂಡಿ ವ್ಯಾಪಾರ ನಡೆಸುತ್ತಿದ್ದರಿಂದ ಹೆದ್ದಾರಿ ಇಕ್ಕಟ್ಟಾಗಿ ಸುಗಮ ವಾಹನ ಸಂಚಾರಕ್ಕೆ ಅವಕಾಶವಿಲ್ಲವಾಗಿದೆ. ಮಾರುಕಟ್ಟೆಯ ರಸ್ತೆಯಲ್ಲಿ ಐದಾರು ವ್ಯಾಪಾರಿಗಳು ದೊಡ್ಡ ಬುಟ್ಟಿಗಳಿಟ್ಟು ಹೆಚ್ಚಿನ ಜಾಗ ಅಕ್ರಮಿಸಿಕೊಳ್ಳುತ್ತಿದ್ದರಿಂದ ಇತರ ವ್ಯಾಪಾರಿಗಳಿಗೆ ಹಾಗೂ ವಾಹನ ಜನ ಸಂಚಾರಕ್ಕೆ ಅಡಚಿಣಿಯಾಗಿ ಮಾರ್ಪಟ್ಟಿದೆ, ಈ ನಡುವೆ ಆಟೋಗಳು ಮತ್ತು ಪೊಲೀಯೋಗಳು ಅಡ್ಡಾದಿಡ್ಡಿಯಾಗಿ ವೇಗವಾಗಿ ಬೈಕ್ ಚಲಿಸುತ್ತಿರುವುದು ಜನ ಸಾಮಾನ್ಯರನ್ನು ಓಡಾಡಲು ಹೆದರುವಂತಾಗಿದೆ. ಅಂಗಡಿಗಳ ಮುಂದಿನ ರಸ್ತೆಯ ಅzರ್sಭಾಗದವರೆಗೆ ಬೈಕ್‍ಗಳು ನಿಲ್ಲಿಸುತ್ತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಪಘಾತಗಳು ಸಂಭವಿಸತೊಡಗಿದೆ. ಇದಕ್ಕೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಈ ಕುರಿತು ಸಂಬಂಧಿತ ಪೊಲೀಸರಾಗಲಿ ಅಥವಾ ಪುರಸಭೆ ಸಂಬಂಧಿತ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೇ ಇರುವುದು ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿ ಮಾರ್ಪಟ್ಟಿದೆ.
ಬಸ್ ಕೊರತೆ:
ಬಸ್ ನಿಲ್ದಾಣದಲ್ಲಿ ವಾಹನ ಪಾರ್ಕಿಂಗ ಇಲ್ಲದೆ ಪ್ರವೇಶ ದ್ವಾರದಲ್ಲೇ ಬೈಕ್‍ಗಳು ನಿಲ್ಲುತ್ತಿವೆ. ಇದರಿಂದ ಪ್ರಯಾಣಿಕರಿಗೆ ನಿಲ್ದಾಣದೊಳಗೆ ಹೋಗಲು ತೊಂದರೆ ಆಗುತ್ತಿದೆ. ಸಂಜೆ ವೇಳೆ ಕಲಬುರಗಿ ಮಾರ್ಗಕ್ಕೆ ಸಂಜೆ ಹೊತ್ತಿನಲ್ಲಿ ನಿರೀಕ್ಷಿತ ಬಸ್‍ಗಳ ಸೌಲಭ್ಯ ಇಲ್ಲದಕ್ಕೆ ಪ್ರಯಾಣಿಕರು ಹಲವು ವರ್ಷಗಳಿಂದ ಪರದಾಡತೊಡಗಿದ್ದಾರೆ. ಸಂಜೆ ವೇಳೆ ಕಲಬುರಗಿಗೆ ಪ್ರಯಾಣಿಕರ ಅನುಗುಣವಾಗಿ ಬಸ್ ಒದಗಿಸಬೇಕು ಎಂದು ಪ್ರಯಾಣಿಕರು ಸಾರಿಗೆ ನಿಗದ ಅಧಿಕಾರಿಗಳಿಗೆ ಹಿಂದಿನಂತೆ ಒತ್ತಾಯಿಸುತ್ತಲೇ ಇದ್ದಾರೆ.