ಬೆಳೆಗಳಿಗೆ ಒಣಹವೆ ಬಾಧೆ, ಮಳೆಗಾಗಿ ರೈತನ ಮುಗಿಲ ನೋಟ ಸಕಾಲಕ್ಕೆ ಸಾಗಿದ ಮುಂಗಾರು ಬಿತ್ತನೆ ಶೇ 72.48 ರಷ್ಟು ಪೂರ್ಣ
ಆಳಂದ:ಜೂ.29: ತಾಲೂಕಿನ ಐದು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಗ್ರಾಮಗಳ ರೈತರ ಹೊಲಗಳಲ್ಲಿ ಮುಂಗಾರು ಬಿತ್ತನೆ ಭರದಿಂದ ಸಾಗಿದ್ದು, ಈಗಾಗೇಲೆ ಶೇ 72.48ರಷ್ಟು ರೈತರು ಬಿತ್ತನೆ ಕೈಗೊಂಡಿದ್ದು, ಇನ್ನೂಳಿದವರು ಬಿತ್ತನೆಯಲ್ಲಿ ತೊಡಗಿದ್ದಾರೆ.
ಜೂನ್ ಮೊದಲು ವಾರದಲ್ಲಿಯೇ ಸುರಿದ ಮುಂಗಾರು ಮಳೆಯಿಂದ ಬಿತ್ತನೆ ಆರಂಭಿಸಿದ್ದ ರೈತರಿಗೆ ಖಜೂರಿ ಮತ್ತು ಆಳಂದ ವಲಯದಲ್ಲಿ ಸತತ ಮಳೆಯಿಂದಾಗಿ ವಾರದ ಬಿಡುವು ನೀಡಿತ್ತಾದರು ಬಹುತೇಕ ಬಿತ್ತನೆ ಯಶಸ್ವಿಯಾಗಿ ಸಾಗಿದೆ. ಆದರೆ ಜೂನ್ ಮೊದಲು ವಾರದಲ್ಲಿ ಬಿತ್ತನೆ ಕೈಗೊಂಡ 15-20 ದಿನಗಳ ಬೆಳೆಗೆ ಒಣಹವೆ ಬಾಧಿಸತೊಡಗಿದ್ದರಿಂದ ರೈತರು ಮಳೆಗಾಗಿ ಮುಗಿಲಿನತ್ತ ನೋಡುವಂತೆ ಮಾಡಿದೆ.
ಈ ಬೆಳೆಗೆ ಸಮಪರ್ಕ ಮಳೆ ಬಾರದೆ ಹೋದಲ್ಲಿ ಅಲ್ಪಾವದಿ ಬೆಳೆ ಉದ್ದು, ಹೆಸರು, ಸೋಯಾ ಇನ್ನಿತರ ಬೆಳೆ ಬೆಳೆಯುವುದಿಲ್ಲ ಬೆಳೆದರು ಕಾಯಿ ಕಟ್ಟಿ ನಿರೀಕ್ಷಿತ ಇಳುವರಿ ಕುಸಿಯುವ ಅತಂಕ ಎದುರಾಗಿದೆ.
ತಾಲೂಕಿನ ನರೋಣಾ, ನಿಂಬರಗಾ ಮತ್ತು ಮಾದನಹಿಪ್ಪರಗಾ ರೈತ ಸಂಪರ್ಕ ಅವಲಯದಲ್ಲಿ ಸುರಿದಮಳೆಯಿಂದ ಬಿತ್ತನೆ ಆರಂಭಿಸಿದ್ದಾರೆ. ಬಿತ್ತನೆ ಕೈಗೊಂಡ ಬೆಳೆಗೆ ಇಲ್ಲೂ ಸಹ ಮಳೆಗಾಗಿ ಎದುರುನೋಟ ಶುರುವಾಗಿದೆ. ತೇವಾಂಶ ಇರುವ ಭೂಮಿಯ ರೈತರು ಮಳೆಯ ನಿರೀಕ್ಷೆಯಲ್ಲಿ ಅಳಿದುಳಿದ ಬಿತ್ತನೆ ಪೂರ್ಣಗೊಳಿಸಲು ಹರಸಹಾಸ ಪಡುತ್ತಿದ್ದಾರೆ.
ಒಟ್ಟಾರೆ ಬಹುವರ್ಷಗಳ ಬಳಿಕ ಮುಂಗಾರಿನಲ್ಲಿ ಸಕಾಲಕ್ಕೆ ಮಳೆ ಮತ್ತು ಬಿತ್ತನೆ ನಡೆದಿರುವುದು ರೈತ ವರ್ಗದಲ್ಲಿ ಸಂತಸದ ಮನೆಮಾಡಿದೆ. ಬಿತ್ತನೆಗೆ ಬೀಜ, ರಸಗೊಬ್ಬರದ ಕೊರತೆ ಕಂಡಿಲ್ಲ್ಲ. ಖಾಸಗಿ ಅಂಗಡಿಗಳಲ್ಲಿ ಬೀಜ, ಗೊಬ್ಬರ ದುಬಾರಿಯ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತು. ಬಿತ್ತನೆಗೆ ಬಹುತೇಕ ರೈತರ ಬಳಿ ಎತ್ತುಗಳಿಲ್ಲ. ಈಗ ಟ್ರ್ಯಾಕ್ಟರ್‍ಗಳ ಮೂಲಕ ಹೆಚ್ಚಿನವರು ಬಿತ್ತನೆ ಎಡೆ, ಗುಂಟಿಯನ್ನು ಸಾಗಮಾಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಎತ್ತುಗಳಿಂದ 4-5 ಎಕರೆ ಮಾತ್ರ ದಿನಕ್ಕೆ ಬಿತ್ತನೆಯಾಗುತ್ತದೆ. ಎತ್ತುಗಳ ಬಿತ್ತನೆಯೇ ಉತ್ತಮ ಬಿತ್ತನೆಯಾಗುತ್ತದೆ. ಅದೇ ಟ್ರ್ಯಾಕ್ಟರನಿಂದ ದಿನಕ್ಕೆ 10ರಿಂದ 12 ಎಕರೆ ಬಿತ್ತನೆ ಕೈಗೊಳ್ಳಬಹುದು. ಹೀಗಾಗಿ ಮುಂಗಾರು ಬಿತ್ತನೆ ಮುಗಿಯುವ ಹಂತಕ್ಕೆ ತಲುಪಿದೆ ಎಂದು ಜಿಡಗಾದ ಪ್ರಗತಿಪರ ರೈತ ಸಂಗಮೇಶ ಲಾವಣಿ ಅವರು ಹೇಳುತ್ತಾರೆ.
ವ್ಯಾಪಾರಿಗಳಿಗೆ ನೋಟಿಸ್:
ಒಟ್ಟು ಪ್ರಸಕ್ತ ಮುಂಗಾರು ಹಂಗಾಮಿನ ತಾಲೂಕಿನಲ್ಲಿ 139855 ಹೆಕ್ಟೇರ್ ಪ್ರದೇಶ ಬಿತ್ತನೆಯ ಗುರಿಯಲ್ಲಿ 101362 ಶೇ ಹೆಕ್ಟೇರ್ ಅಂದರೆ ಶೇ 72.48ರಷ್ಟು ಮುಂಗಾರು ಬಿತ್ತನೆ ಪೂರ್ಣಗುಂಡಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿ 66 ಸಾವಿರ ಹೆಕ್ಟೇರ್, 23679 ಹೆಕ್ಟೇರ್ ಸೋಯಾಭಿನ್ ಬಿತ್ತನೆಯ ಹೊರತು ಪಡಿಸಿಯುವ ಇನ್ನಿತರ ಬೆಳೆ ಬಿತ್ತನೆಯಾಗಿದೆ. ತಾಲೂಕಿನಲ್ಲಿ ಉತ್ತಮವಾಗಿ ಮಳೆ ಬಂದಿದೆ. ಬೆಳೆ ಬೆಳವಣಿಗೆ ಮತ್ತು ಮೊಳಕೆ ಹಂತದಲ್ಲಿದೆ. ಜೊತೆಗೆ ಬಿತ್ತನೆ ಕಾರ್ಯ ಪ್ರಗತಿಯಲಿದೆ. ಬೀಜ ಗೊಬ್ಬರದ ಯಾವುದೇ ಕೊರತೆಯಿಲ್ಲ. ದಾಖಲೆ ಸರಿಯಾಗಿ ನಿರ್ವಹಿಸದ ಮತ್ತು ದರಪಟ್ಟಿ ನಾಮಫಲಕ ಹಾಕದ ಔಷಧ ಮತ್ತು ರಸಗೊಬ್ಬರ ವ್ಯಾಪಾರಿ ಐವರಿಗೆ ನೋಟಿಸ್ ನೀಡಲಾಗಿದೆ.
ಶರಣಗೌಡ ಪಾಟೀಲ ಸಹಾಯಕ ಕೃಷಿ ನಿರ್ದೇಶಕರು ಆಳಂದ.