ಜನಸ್ಪಂದನ ಯೋಜನೆಯ ಲಾಭ ಪಡೆದುಕೊಳ್ಳಿ
ಚನ್ನಮ್ಮನ ಕಿತ್ತೂರು,ಜೂ.29: ಸಿಎಂ ಅವರ ಸೂಚನೆಯಂತೆ ಆಡಳಿತವೇ ಸಾರ್ವಜನಿಕರ ಮನೆ-ಮನೆಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜನಸ್ಪಂದನ ಯೋಜನೆ ಜಾರಿಗೊಳಿಸಲಾಗಿದೆ ಇದರ ಲಾಭ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೀಶ ಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾತಯ, ತಾಲೂಕಾಡಳಿತ, ತಾಪಂ, ಪಪಂ, ಕಿತ್ತೂರು-ಎಂ.ಕೆ.ಹುಬ್ಬಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಲ್ಮಠ ಆವರಣದ ಚಂದರಗಿ ಸಭಾಭವನದಲ್ಲಿ ನಡೆದ ಜನಸ್ಪಂದಟಿ ಕಾರ್ಯಕ್ರಮದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಿಸಿದ ಆಯಾ ಇಲಾಖಾ ಅಧಿಕಾರಿಗಳ ಗಮನ ಸೆಳೆಯುವ ಮೂಲಕ ತ್ವರಿತವಾಗಿ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಹಾಗೂ ಸರ್ಕಾರಿ ಯೋಜನೆಗಳು ದೊರೆಯಬೇಕಾದರೆ ಆಡಳಿತದಲ್ಲಿ ಸುಧಾರಣೆ ಅವಶ್ಯವಿದ್ದು ಈ ಇಬ್ಬರ ಮಧ್ಯ ಉತ್ತಮ ಬಾಂದವ್ಯ ನಿರ್ಮಾಣವಾಗಲೆಂದು ಪ್ರತಿ ತಾಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಮ ಸರ್ಕಾರ ಹಮ್ಮಿಕೊಂಡಿದೆ. ಜಿಲ್ಲಾಧಿಕಾರಿಯವರು ಸಾರ್ವಜನಿಕರ ಕುಂದು-ಕೊರತೆಗಳನ್ನು ಶೀಘ್ರವಾಗಿ ಬಗೆಹರಿಸುತ್ತಾರೆ. ಎಂಬ ಭರವಸೆ ನಮಗಿದೆ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ರಾಣಿ ಚನ್ನಮ್ಮಾಜೀ ವೃತ್ತದಿಂದ ಗುರುವಾರ ಪೇಟೆ ಮಾರ್ಗವಾಗಿ ಪೋಲಿಸ್ ಠಾಣೆ ಅರಳೀಕಟ್ಟೆ ವರೆಗೆ ಬೈಕ ಜಾಥಾ ಮೂಲಕ ಹೆಲ್ಮೆಟ್ ಜಾಗೃತಿ ಮೂಡಿಸಲಾಯಿತು. ಜೊತೆಯಲ್ಲಿ ನ್ಯಾಯವಾದಿಗಳು ಸಾಥ ನೀಡಿದರು.
ಈ ವೇಳೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಪ್ರೋಬೇಷÀನರಿ ಆಯ್‍ಏಎಸ್ ಅಧಿಕಾರಿ ದಿನೇಶಕುಮಾರ ಬಿನಾ, ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ತಹಶೀಲ್ದಾರ ರವೀಂದ್ರ ಹಾದಿಮನಿ, ಬೈಲಹೊಂಗಲ ತಹಶೀಲ್ದಾರ ಹನಮಂತ ಶಿರಹಟ್ಟಿ, ಡಿಎಸ್‍ಪಿ ರವಿ ನಾಯ್ಕ, ತಾಪಂ ಇಓ ಕಿರಣ ಘೋರ್ಪಡೆ, ಪಿಎಸ್‍ಐ ಪ್ರವೀಣ ಗಂಗೋಳ, ಸಿಪಿಐ ಮಲ್ಲಿಕಾರ್ಜುನ ದಪ್ಪಿನ್, ಇನ್ನುಳಿದ ಅಧಿಕಾರಿ ಅಶೋಕ ಹೊಸಗೇರಿ, ಗಾಯತ್ರಿ ಅಜ್ಜನವರ, ಸಂಜೀವ ಮಿರಜಕರ, ಆರ್‍ಪಿ ಖಾನಾಪೂರ, ಅರುಣಕುಮಾರ, ಸಂಜೀವ ಮಗದುಮ, ಮಂಜುನಾಥ ಕೆಂಚರಾವುತ, ಲ್ಯಾಂಡ ಆರ್ಮಿ, ಅಬಕಾರಿ, ಕೆಎಸ್‍ಆರ್‍ಟಿಸಿ, ವಿವಿಧ ಇಲಾಖಾ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರಿದ್ದರು.