ಯುವಕರು ಮಾದಕ ವಸ್ತುಗಳಿಂದ ದೂರವಿರಬೇಕು
ಗುಳೇದಗುಡ್ಡ,ಜೂ.29: ಪಾಶ್ಚಾತ್ಯ ಸಂಸ್ಕøತಿಯ ಪ್ರಭಾವದಿಂದ ಇಂದಿನ ಯುವ ಜನಾಂಗ ನಮ್ಮ ಉತ್ಕøಷ್ಟ ಸಂಸ್ಕøತಿಯನ್ನು ಕಡೆಗಣಿಸುತ್ತಿರುವುದು ಕಳವಳಕಾರಿಯಾಗಿದೆ. ಯುವಕರು ಗುಟಕಾ, ಸಿಗರೇಟ್, ಸರಾಯಿ ಮತ್ತು ಗಾಂಜಾದಂತಹ ಮಾದಕ ವಸ್ತುಗಳಿಂದ ದೂರವಿದ್ದು ಸದೃಢ ಆರೋಗ್ಯ ಹೊಂದಿ ಜೀವನದಲ್ಲಿ ಉನ್ನತ ಗುರಿಯನ್ನು ಹೊಂದಬೇಕು ಎಂದು ಪಿಎಸ್‍ಐ ಎಲ್.ಎಂ. ಆರಿ ಹೇಳಿದರು.
ಅವರು ಇಲ್ಲಿನ ಎಸ್.ಆರ್.ವಸ್ತ್ರದ ರೂರಲ್ ಪಾಲಿಟೆಕ್ನಿಕ್‍ನಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಫ್. ಹರ್ಲಾಪೂರ ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾದ ತಾಂತ್ರಿಕ ಜ್ಞಾನವನ್ನು ಸಂಪಾದನೆ ಮಾಡಿ, ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಬೇಕು. ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪರಾದ ವಿಭಾಗದ ಪಿಎಸ್‍ಐ ಸಿ.ಬಿ.ಕಿರಶ್ಯಾಳ, ಜಿ.ವಿ. ರಾಂಪೂರ, ಉಪನ್ಯಾಸಕ ಎಸ್.ಎಚ್.ಮೇಡಿ, ಸಂಗಮೇಶ ಗೊಬ್ಬಿ, ಎಚ್. ಎಲ್. ನಾಯ್ಕರ್, ಎಸ್.ಜಿ, ರಾಮೇನಹಳ್ಳಿ, ಪರಶುರಾಮ ಮೇಘರಾಜ, ಸುರೇಶ ರಾಜನಾಳ, ಶಶಿಕಾಂತ ಮೆಗೆನ್ನಿ, ಆರ್.ಎಸ್.ದೊಡಮನಿ ಹಾಗೂ ಸಂಸ್ಥೆಯ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಯರು ಉಪಸ್ಥಿತರಿದ್ದರು.