ಕೈಗಾರಿಕಾ  ಪ್ರದೇಶದಲ್ಲಿ ಮೂಲಭೂತ ‌ಸೌಲಭ್ಯ ಸಮಸ್ಯೆ  ಈಡೇರಿಸುವೆ: ನಂದೀಶ್
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂನ್.‌ 29 ನಗರದ ; ಕೈಗಾರಿಕಾ ‌ವಸಾಹತು ಪ್ರದೇಶದಲ್ಲಿನ ನೀರು, ಬೀದಿ ದೀಪ, ರಸ್ತೆ ಸೇರಿದಂತೆ ಇತರೇ  ಮೂಲಭೂತ ‌ಸೌಲಭ್ಯಗಳ ಸಮಸ್ಯೆ ಈಡೇರಿಸುವುದಾಗಿ‌ ಮೇಯರ್ ಮುಲ್ಲಂಗಿ ನಂದೀಶ್ ಭರವಶೆ ನೀಡಿದ್ದಾರೆ.
ಬಳ್ಳಾರಿ‌ಜಿಲ್ಲಾ  ಕಾಟನ್ ಅಸೋಸಿಯೇಷನ್ ಕಚೇರಿಯಲ್ಲಿ ಅವರು ನಿನ್ನೆ  ಅಸೋಸಿಯೇಷನ್ ‌ಅಧ್ಯಕ್ಷ ಬಿ. ತಿಪ್ಪಯ್ಯ, ಬಳ್ಳಾರಿ ಜಿಲ್ಲಾ  ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.‌ ಮಹಾರುದ್ರಗೌಡ ಸವರಿಂದ ಗೌರವ ಸನ್ಮಾನ ಪಡೆದು ಮಾತನಾಡುತ್ತಿದ್ದರು.
ಬಳ್ಳಾರಿ ಮಹಾನಗರ‌ ಪಾಲಿಕೆಯ ವ್ಯಾಪ್ತಿಯಲ್ಲಿ ‌ಬರುವ ಕೈಗಾರಿಕಾ ‌ವಸಾಹತು‌ ಪ್ರದೇಶದಲ್ಲಿ ನೀರು, ರಸ್ತೆ,, ತೆರಿಗೆ ವ್ಯತ್ಯಾಸ, ಬೀದಿ ದೀಪಗಳ ನಿರ್ವಹಣೆ  ಸಮಸ್ಯಗಳನ್ನು.  ನನ್ನ ಅಧಿಕಾರವಧಿಯಲ್ಲಿ ಸಾಧ್ಯವಾದಷ್ಟು ಪರಿಹರಿಸಲು ಪ್ರಯತ್ನಿಸುವೆ ಎಂದಿದ್ದಾರೆ.
ಬಿಡಿಸಿಸಿ ಅಂಡ್ ಐನ ಎಸ್.‌ ದೊಡ್ಡನಗೌಡರು, ಕೆ.ಸಿ. ಸುರೇಶಬಾಬು, ವೀರೇಶಗೌಡ, ಸ್ವಾತಿ ಗೋವಿಂದ ರೆಡ್ಡಿ, ಟಿ. ಚನ್ನಪ್ಪ, ಮಣಿಕಂಠ ರವಿ, ಹೊನ್ನನಗೌಡ ಇನ್ನಿತರರು ‌ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.