ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಬೆರಳಚ್ಚುಗಾರರ ನೇಮಕಾತಿ ರದ್ದು
* ಉಚ್ಛನ್ಯಾಯಾಲಯದ ಆದೇಶದಂತೆ
* ನೇಮಕ ಮಾಡಿದ ಜಿಲ್ಲಾ ನ್ಯಾಯಾಧೀಶರಿಂದಲೇ ರದ್ದು
* ಬೆರಳಚ್ಚು ನಕಲುಗಾರರ ಹುದ್ದೆಗಳೂ ರದ್ದು.
* ಕಳೆದ ಎರೆಡು ದಶಕಗಳ ನ್ಯಾಯಾಂಗ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ
* ಅಕ್ರಮದ ದೂರುಗಳ ಹಿನ್ನಲೆ ರದ್ದು ಎಂಬ ಶಂಕೆ
* ನೇಮಕಾತಿ  ಪ್ರಕ್ರಿಯೆ ತನಿಖೆಗೆ ಒತ್ತಾಯ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.29: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ‌ ಮಾಡಿದ್ದ ಬೆಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರ ಹುದ್ದೆಗಳ ನೇಮಕಾತಿಯನ್ನು. ನೇಮಕ ಮಾಡಿದ್ದ ಜಿಲ್ಲಾ ನ್ಯಾಯಾಧೀಶೆ ಎಸ್.ಹೆಚ್.ಪುಷ್ಪಾಂಜಲಿ ದೇವಿಯವರು ನಿನ್ನೆ ರದ್ದು ಮಾಡಿದ ಆದೇಶ ಹೊರಡಿಸಿದ್ದಾರೆ.
ಅವರು ಆದೇಶದಲ್ಲಿ ಉಚ್ಛನ್ಯಾಯಾಲಯದ ಸೂಚನೆಯಂತೆ ರದ್ದು ಮಾಡಿದೆ  ಎಂದು ನೇಮಕಾತಿ‌ ಪ್ರಕ್ರಿಯೆಯ ದಿನಾಂಕಗಳ ಸಮೇತ ವಿವರಿಸಿದ್ದಾರೆ.
ಕಳೆದ ತಿಂಗಳು ನೇಮಕಾತಿಗೆ ಸಂದರ್ಶನ ನಡೆದಿತ್ತು. ಅರ್ಹವಾದವರಿಗೆ ಹುದ್ದೆ ಸಿಗದೆ, ಅನರ್ಹರಿಗೆ ಕೆಲವರು ಶಿಫಾರಸ್ಸು ಮಾಡಿದವರಿಗೆ ಹುದ್ದೆ ನೀಡಿದೆಂದು ಅರ್ಹ ಅಭ್ಯರ್ಥಿಗಳು ಉಚ್ಚನ್ಯಾಯಾಲಯಕ್ಕೆ ದೂರು ನೀಡಿದ ಹಿನ್ನಲೆಯಲ್ಲಿ. ಆ ನ್ಯಾಯಾಲಯ ನೇಮಕಾತಿ ರದ್ದಿಗೆ ಸೂಚನೆ ನೀಡಿದೆಯಂತೆ.
ಈ ರೀತಿ ಜಿಲ್ಲಾ ನ್ಯಾಯಾಲಯದಲ್ಲಿ‌ ನಡೆದ ನೇಮಕಾತಿಗಳು ರದ್ದಾಗಿರುವ ಇತಿಹಾಸ ಕಳೆದ ಎರೆಡು ದಶಕಗಳಿಂದ ನಡೆದಿಲ್ಲವಂತೆ.
ನೇಮಕಾತಿ ಮಾಡಿದ್ದ ಜಿಲ್ಲಾ ನ್ಯಾಯಾಧೀಶರು ನಾಳೆ ನಿವೃತ್ತಿಯಾಗುತ್ತಿದ್ದು. ಇಂತಹ ಸಂದರ್ಭದಲ್ಲಿ ಅವರು ಮಾಡಿದ ನೇಮಕಾತಿಯ ಆದೇಶವನ್ನು ಅವರೇ ರದ್ದು ಪಡಿಸಿದ್ದು ಖೇದಖರ ಸಂಗತಿ.
ಅಕ್ರಮದ ವಾಸನೆ:
ಈ ನೇಮಕಾತಿಯಲ್ಲಿ ಕಾಣದ ವ್ಯಕ್ತಿಗಳ  ಕೈವಾಡದಿಂದ ಅಕ್ರಮ ನಡೆದಿದೆಂಬ‌ ಮಾತುಗಳು ಕೇಳಿ ಬರುತ್ತಿವೆ. ಕೋತಿ ತಾನು ತಿಂದು ಮೇಕೆ ಮೂತಿಗೆ ಒರಿಸಿದಂತೆ ಎಂಬ ಗಾದೆ ಮಾತಿನಂತೆ. ಹುದ್ದೆಗಳ ನೇಮಕಾತಿಗೆ ಪ್ರಭಾವಿ ವ್ಯಕಿಗಳು ಅಭ್ಯರ್ಥಿಗಳಿಂದ ಪ್ರತಿಫಲ ಪಡೆದು ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿ ಅಕ್ರಮ ನಡೆಯಲು ಕಾರಣ ಎನ್ನಲಾಗುತ್ತಿದೆ.
ಅಕ್ರಮದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ದೂರುಗಳ ಹಿನ್ನಲೆಯಲ್ಲಿ   ಜಿಲ್ಲಾ ನ್ಯಾಯಾಲಯ ಮಾಡಿದ ನೇಮಕಾತಿ ಆದೇಶಗಳನ್ನು  ರದ್ದು ಮಾಡಿದೆ.  ಇದರಿಂದಾಗಿ ತಾವು ಪ್ರಾಮಾಣಿಕರು  ಅಂತ ಬೆನ್ನು ತಟ್ಟಿಕೊಂಡವರ ಮುಖವಾಡ ಕಳಚಿಬಿದ್ದಂತಾಗಿದೆ. ಈ ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಸಿದರೆ.
ಪಾಲುದಾರರ ಮುಖವಾಡಗಳು ಬಯಲಿಗೆ ಬರುತ್ತವೆ.
ಬಿ.ರವೀಂದ್ರನಾಥ, ಕಾರ್ಯದರ್ಶಿಗಳು, ಬಳ್ಳಾರಿ  ವಕೀಲರ ಸಂಘ.