ಸರ್ಕಾರಿ ಶಾಲೆ ಮಕ್ಕಳಿಗೆ ಛತ್ರಿಗಳ ವಿತರಣೆ
ಸಂಜೆವಾಣಿ ವಾರ್ತೆ
ಹನೂರು ಜೂ 29 :- ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಡೆಸ್ಟ್ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲಾ ಮಕ್ಕಳಿಗೆ ಉಚಿತವಾಗಿ ಛತ್ರಿಗಳನ್ನು ವಿತರಣೆ ಮಾಡಲಾಯಿತು.
ಮಾರ್ಟಳ್ಳಿ ಗೋಲ್ಡನ್ ಪಾರ್ಕ್ ಇನ್ ಕಟ್ಟಡ ಮಾಲಿಕರಾದ ಶ್ರೀ ಸೆಬಾಸ್ಟಿಯನ್ ರವರು ಶಾಲಾ ಮಕ್ಕಳಿಗೆ ಉಚಿತವಾಗಿ ”ಛತ್ರಿ”ಗಳನ್ನು ಉಚಿತವಾಗಿ ನೀಡಿ ಮಕ್ಕಳಿಗೆ ಬಿಸಿಲು ಮಳೆಯಲ್ಲಿ ರಕ್ಷಣೆಯಾಗಲಿ ಎಂಬ ದೃಷ್ಟಿಯಿಂದ ವಿತರಣೆ ಮಾಡಲಾಗಿದೆ.
ಬಡ ಮಕ್ಕಳು ಬಿಸಿಲು ಮತ್ತು ಮಳೆಯ ಝಳಕ್ಕೆ ತುತ್ತಾಗದಿರಲು ಛತ್ರಿಗಳನ್ನು ನೀಡಿದ ದಾನಿಗಳಿಗೆ ದೇವರು ಉತ್ತಮ ಆರೋಗ್ಯ ಮತ್ತು ಆಯಸ್ಸು ನೀಡಲಿ ಎಂದು ಶಿಕ್ಷಕರು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಹನೂರು ತಾಲ್ಲೂಕಿನ ಉಪಾಧ್ಯಕ್ಷ ಕಮಲನಾಥ್, ಗ್ರಾ.ಪಂ.ಸದಸ್ಯ ಆರುಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸಂಗೀತಾ, ಶಿಕ್ಷಕಿ ಅಮಲರಾಣಿ ಹಾಗೂ ಮುಖ್ಯ ಶಿಕ್ಷಕ ಜಾನ್ ಬ್ರೀಟ್ಟೋ ಹಾಜರಿದ್ದರು.