ಕೊಟ್ಪಾ ಕಾಯ್ದೆ ಉಲ್ಲಂಘನೆ: ವಿಶೇಷ ಕಾರ್ಯಾಚರಣೆ
ಗದಗ, ಜೂ29: ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ.ವೆಂಕಟೇಶ ರಾಥೋಡ್ ಇವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳ ನಗರದ ಕಲಾಮಂದಿರ ರಸ್ತೆ,ಹಳೆ ಬಸ್ ನಿಲ್ದಾಣ, ಪಾಟೇಲ ರೋಡ, ತಿಲಕ್ ಪಾರ್ಕ,ಕೆ.ಸಿ.ರಾಣಿ ರೋಡ,ಹಾತಲಗೇರಿ ನಾಕಾ ಗದಗದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೋಟ್ಪಾ ಕಾಯ್ದೆ ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು.
ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003 ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಅ ಸ್ಥಳದ ಮಾಲೀಕರ ಜವಾಬ್ದಾರಿಯಾಗಿರುತ್ತದೆ, ಕೆಲವು ಅಂಗಡಿಗಳ ಹಿಂದೆ ಧೂಮಪಾನ ಅನಧಿಕೃತ ಅಡ್ಡಾಗಳನ್ನು ಮಾಡಿಕೊಂಡಿರುವವರ ವಿರುದ್ಧ ಕೂಡಾ ಕ್ರಮ ವಹಿಸಲಾಯಿತು.
ಈ ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಗೋಪಾಲ ಸುರಪುರ, ಆಹಾರ ಸುರಕ್ಷತಾ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಟಿ.ಎಸ್.ಪವಾರ, ಪೆÇಲೀಸ್ ಇಲಾಖೆಯ ಜೆ.ಹೆಚ್.ಅಳಗುಂದಿ. ಸೋಮಶೇಖರ, ಎಂ.ಎಂ.ಮಖಾಂದರ, ಶ್ರೀಮತಿ ಹೆಚ್,ಎಸ್,ಜೋಗರ ಸಿಡಿಪಿಓ, ಆರೋಗ್ಯ ಇಲಾಖೆಯ ವೈ,ಎನ್,ಕಡೆಮನಿ, ಹಿರಿಯ ನಿರೀಕ್ಷಣಾಧಿಕಾರಿಗಳು ಗದಗ, ಶ್ರಿಮತಿ ಬಸಮ್ಮ ಚಿತ್ತರಗಿ ಸಾಮಾಜಿಕ ಕಾರ್ಯಕರ್ತೆ, ಶಿವಕುಮಾರ ಬಗಾಡೆ ಹಾಜರಿದ್ದರು.