ಬದುಕಿನಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸಾಗಿ
ಬೈಲಹೊಂಗಲ,ಜೂ29 : ಬದುಕಿನಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಪರೋಪಕಾರಿಯಾದಾಗ ಮಾತ್ರ ಮಾನವನ ಜೀವನ ಸಾರ್ಥಕವಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿಣಿ ಬಿ.ಕೆ.ಪ್ರಭಾ ಮಾತೆಯವರು ಹೇಳಿದರು.
ಅವರು ಪಟ್ಟಣದ ಇಂಚಲ ರಸ್ತೆಯಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಖಾ ಮಂದಿರದಲ್ಲಿ ಮಾತೇಶ್ವರಿ ಜಗದಂಭಾ ಸರಸ್ವತಿ ಮಮ್ಮಾ ಅವರ ದಿವ್ಯ ಸ್ಮøತಿ ದಿನಾಚಾರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಿತ್ಯ ಪರಮಾತ್ಮನ ಪೂಜೆ, ಪ್ರಾರ್ಥನೆ ಮಾಡಿ ಉತ್ತಮ ಜ್ಞಾನ ಪಡೆದರೆ ಮನಸ್ಸು ಶಾಂತವಾಗಲಿದ್ದು ಸಾಧಕರ ಕ್ರಮ ಅನುಸರಿಸಿ ಸಾಧನೆಯ ಪಥದತ್ತ ಪ್ರತಿಯೊಬ್ಬರು ಸಾಗಬೇಕೆಂದರು.
ಬಿ.ಕೆ.ಬಸವರಾಜ ತಿಗಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಲವಾರು ವರ್ಷಗಳಿಂದ ಇಲ್ಲಿನ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಓಂ ಶಾಂತಿ ಕೇಂದ್ರವು ಈ ಭಾಗದ ಜನರಲ್ಲಿ ಅಧ್ಯಾತ್ಮದ ವಿಚಾರಗಳನ್ನು ಬಿತ್ತಿ ಸುಜ್ಞಾನರನ್ನಾಗಿ ಮಾಡುತ್ತಿದೆ ಎಂದರು.
ಗಣ್ಯರಾದ ಬಿ.ಬಿ.ಗಣಾಚಾರಿ, ಮಡಿವಾಳಪ್ಪ ಹೋಟಿ, ವೀರುಪಾಕ್ಷಪ್ಪ ಕೋರಿಮಠ, ವಿಠ್ಠಲ ದಾಸೋಗ, ದಯಾನಂದ ಹೋಟಿ, ವಾಯ್.ಎಂ.ದಳವಾಯಿ, ಡಾ.ಜೆ.ಬಿ.ಪಾಟೀಲ, ಪ್ರಕಾಶ ಬೆಟಗೇರಿ, ಎಸ್.ಎಂ.ಪಟ್ಟಿಹಾಳ, ಐ.ಎಸ್.ಬಳಿಗಾರ, ಬಿ.ಎಪ್.ತಳವಾರ, ಎಸ್.ಎಚ್.ಹಾಲನ್ನವರ, ಬಸಪ್ಪ ಮತ್ತಿಕೊಪ್ಪ, ನಿವೃತ ಶಿಕ್ಷಕ ಬಸವರಾಜ ಕರ್ಕಿ, ಮಹಾಂತೇಶ ಕಾಜಗಾರ, ಗಿರೀಜಾ ದೇಶನೂರ, ಸುವರ್ಣ ಅಳಗುಂಡಿ, ಗೌರಾಂಬಿಕೆ ಬೆಟಗೇರಿ ಮುಂತಾದವರು ಉಪಸ್ಥಿತರಿದ್ದರು.
ಬಿ.ಕೆ.ಬಸವರಾಜ ಬಬ್ಬನಹಳ್ಳಿ ಸ್ವಾಗತಿಸಿದರು. ತಾಲೂಕಾ ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ ನಿರೂಪಿಸಿದರು. ಸಿದ್ದಲಿಂಗಪ್ಪ ಸಿದ್ದಯ್ಯನವರ ವಂದಿಸಿದರು.