ಅವ್ಯವಹಾರ ತನಿಖೆ ನಡೆಸಿಡಾ.ಬಿ.ಆರ್. ಅಂಬೇಡ್ಕರ್ ಸೇನೆಯಿಂದ 4ನೇ ದಿನದ ಧರಣಿ
ಆಲಮೇಲ :ಜೂ.29: ತಾಲೂಕಿನ ಗಬಸಾವಳಗಿ ಗ್ರಾ. ಪಂ. ಯಲ್ಲಿ ನಡೆದ ಅವ್ಯವಹಾರದ ತನಿಖೆಗೆ ಆಗ್ರಹಿಸಿ ನಾಲ್ಕು ದಿನಗಳಿಂದ ಡಾ.ಬಿ.ಆರ್. ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳು ಪಟ್ಟಣದ ತಾಲ್ಲೂಕು ಪಂಚಾಯಿತಿ ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು.
ಡಾ. ಬಿ.ಆರ್. ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಮಹಾವೀರ ಸುಲ್ಫಿ ಮಾತನಾಡಿ ಈಗಾಗಲೇ ಅವರ ನೇತೃತ್ವದಲ್ಲಿ ಹಲವಾರು ಭಾರಿ ವiನವಿ ಸಲ್ಲಿಸಿದ್ದು, 2023-24ನೇ ಸಾಲಿನ ನೀರು ಮತ್ತು ನೈರ್ಮಲ್ಯ ಯೋಜನೆ ಅಡಿಯಲ್ಲಿ 70 ಲಕ್ಷ ರೂಪಾಯಿಗಳ ಅಧಿಕ ಮೊತ್ತದ ಕಾಮಗಾರಿ ಪೂರ್ಣಗೊಳಿಸದೆ ಬಿಲ್ ಎತ್ತಿದ್ದಾರೆ. ಈ ಕುರಿತು ತನಿಖೆ ಆಗಬೇಕು ಗ್ರಾ.ಪಂ ವ್ಯಾಪ್ತಿಯ ಆಹೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಹಾಯಕ ಹುದ್ದೆ ಖಾಲಿಯಿದ್ದು, ದಲಿತ ಮಹಿಳೆ ಅರ್ಜಿ ಸಲ್ಲಿಸಿದ್ದಾರೆ, ಆ ಹುದ್ದೆ ಅವರಿಗೆ ನೀಡಬೇಕು. ಈ ಬೇಡಿಕೆ ಈಡೇರುವವರೆಗೆ ಧರಣಿ ಹಿಂಪಡೆಯುವುದಿಲ್ಲ, ಜಿಲ್ಲಾ ಮುಖ್ಯ ಕಾರ್ಯದರ್ಶಿಯವರು ಗ್ರಾ.ಪಂ. ಹಾಗೂ ಸರ್ಕಾರಿ ಶಾಲೆಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಬಗೆಹರಿಸಬೇಕೆಂದು ಡಾ. ಬಿ.ಆರ್. ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಪವನ್ ಕಾಳೆ, ಮೇಘರಾಜ ಬಮ್ಮನಹಳ್ಳಿ, ಪ್ರವೀಣ ಜವಳಿ, ಪ್ರಕಾಶ ಸುಲ್ಫಿ, ವಿಜಯ ಬ್ಯಾಕೋಡೆ, ಆಕಾಶ ಹಾವೇರಿ, ಮಲ್ಲು ಮೇಲಿನಮನಿ, ಗಾಲೀಬ್ ನಾದ, ಬಾಬು ಬಬ್ಬರ್, ಶೇಖರ್ ಭಜಂತ್ರಿ ಇದ್ದರು