ಶ್ರೀ ಮ.ಮ ಬೆಟ್ಟದ ಹುಂಡಿ ಹಣ ಎಣಿಕೆ: 30 ದಿನಗಳಲ್ಲಿ 2.ಕೋಟಿ 20.ಲಕ್ಷ 97.ಸಾವಿರ ರೂ. ಸಂಗ್ರಹ
ಸಂಜೆವಾಣಿ ವಾರ್ತೆ
ಹನೂರು ಜೂ 29 :- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯ ಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 30 ದಿನಗಳಲ್ಲಿ ಸುಮಾರು 2.ಕೋಟಿ 20.ಲಕ್ಷ 97 ಸಾವಿರ ರೂ ಸಂಗ್ರಹವಾಗಿದೆ.
ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬೆಳಿಗ್ಗೆಯಿಂದ ಸಾಲೂರು ಬ್ರಹನ್ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಪ್ರಾಧಿಕಾರ ಕಾರ್ಯದರ್ಶಿ ರಘು ಅವರ ನೇತೃತ್ವದಲ್ಲಿ ಹುಂಡಿ ಪರ್ಕಾವಣೆ ಕಾರ್ಯ ಪ್ರಾರಂಭವಾಗಿ ಸಂಜೆಯವರೆಗೂ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.
ದಿನಾಂಕ : 29/05/2024 ರಿಂದ 27/06/2024 ರವರೆಗಿನ 30 ದಿನಗಳಲ್ಲಿ ಒಟ್ಟು ಮೊತ್ತ ರೂ 2. ಕೋಟಿ 20 ಲಕ್ಷ.97 ಸಾವಿರ 533 ರೂ.ಗಳು ಹಾಗೂ ಚಿನ್ನ 106 ಗ್ರಾಂ, ಬೆಳ್ಳಿ 2 ಕೆ.ಜಿ 100 ಗ್ರಾಂ ಸಂಗ್ರಹವಾಗಿದೆ. ಜೊತೆಗೆ ವಿದೇಶಿ ನೋಟುಗಳು 06, ಹಾಗೂ ಚಲಾವಣೆಯಲ್ಲಿರದ 2000 ಮುಖ ಬೆಲೆಯ 19 ನೋಟುಗಳು ದೊರೆತಿದೆ.
ಹಾಗೂ (ಫೆÇೀನ್ ಪೇ ಗೂಗಲ್ ಪೇ) ಇ-ಹುಂಡಿಯಲ್ಲಿ 3ಲಕ್ಷ, 38 ಸಾವಿರ, 830ರೂ.ಬಂದಿದೆ. ಒಟ್ಟು 2,24,36,363.00 ರೂ. ಒಟ್ಟು ಒಂದು ತಿಂಗಳ ಅವಧಿಯಲ್ಲಿ ಮಲೆ ಮಹದೇಶ್ವರ ಸ್ವಾಮಿಗೆ ಭಕ್ತರು ಸಮರ್ಪಿಸಿದ ಕಾಣಿಕೆ ಇದಾಗಿದೆ.
ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್. ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಛೇರಿ ಮುಜರಾಯಿ ಶಾಖೆಯ ಮಧು ಶ್ರೀ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೆÇಲೀಸ್ ಅಧಿಕಾರಿಗಳು, ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರು ಸಿಬ್ಬಂದಿಗಳು ಹಾಜರಿದ್ದರು.