ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರ ಸ್ವಾಮಿಯವರ ಮುತ್ತಿನ ಪಲ್ಲಕಿ ಉತ್ಸವ ಮೆರವಣಿಗೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 29:- ಚಾಮರಾಜೇಶ್ವರ ದೇವಸ್ಥಾನದಲ್ಲಿ ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮುತ್ತಿನ ಪಲ್ಲಕಿ ಉತ್ಸವ ಮೆರವಣಿಗೆ ಶಾಸಕರಾದ ಹಾಗೂ ಎಂ ಎಸ್ ಐ ಎಲ್ ಅಧ್ಯಕ್ಷರಾದ ಈ ಪುಟ್ಟರಂಗಶೆಟ್ಟಿ ಬಾಗಿ ಮೆರವಣಿಗೆಯು ಚಾಮರಾಜನಗರದ ರಥದಬೀದಿ ಹಾಗೂ ಅಗ್ರಹಾರ ಬೀದಿ ,ದೊಡ್ಡಂಗಡಿ ಬೀದಿ , ಚಿಕ್ಕ ಅಂಗಡಿ ಬೀದಿ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ಸಾಗುವ ಮೂಲಕ ದೇವಸ್ಥಾನ
ಪ್ರದಕ್ಷಣೆ ಹಾಕಿ ಚಾಮರಾಜೇಶ್ವರ ದೇವಸ್ಥಾನ ತಲುಪಿತು.ಆಗಮಿಕರಾದ ದರ್ಶನ್, ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರದ ನಾಗರಾಜ್ ದೀಕ್ಷಿತ್,ಅನಿಲ್ ಕುಮಾರ್ ದೀಕ್ಷಿತ್, ಕೆಂಪನಂಜಾಂಬ ಅರ್ಚಕರಾದ ರಾಮಕೃಷ್ಣ ಭಾರದ್ವಾಜ್, ಉತ್ಸವ ಸಮಿತಿ ಸದಸ್ಯರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.