ಜ್ಯುವೆಲರಿ ಷೋ ಗೆ ಚಾಲನೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.29:- ಮದುವೆ, ಹಾಗೂ ಶುಭಕಾರ್ಯಗಳಿಗೆ ಮೆರಗು ನೀಡಲು ಮೈಸೂರಿನಲ್ಲಿ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಟವನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸುವ ಎರಡು ದಿನಗಳ ದ ಜ್ಯುವೆಲರಿ ಷೋ ಗೆ ಶುಕ್ರವಾರ ಚಾಲನೆ ದೊರೆಯಿತು.
ಜೂ.28,29, ಮತ್ತು 30, 2024 ರಂದು “ರಾಡಿಸನ್ ಬ್ಲೂ ಹೋಟೆಲ್” ನಲ್ಲಿ ನಡೆಯುವ ಮೇಳವನ್ನು ನಟಿ ಆರಾಧನ ಉದ್ಘಾಟಿಸಿದರು. ಬಳಿಕ ಮಾತನಾಡಿ, ಎಲ್ಲರಿಗೂ ಒಡವೆ ಎಂದರೆ ಇಷ್ಟ. ಅಂತಹ ಇಷ್ಟದ ವಿವಿಧ ಅಂಗಡಿಗಳನ್ನು ಒಂದೇ ವೇದಿಕೆಯಲ್ಲಿ ನೋಡಲು ಬಹುದು ಹಾಗೂ ಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಇಲ್ಲಿ ಭಾಗವಹಿಸುವಂತೆ ಹೇಳಿದರು.
ಮುಂಬರುವ ಮದುವೆ ಸಮಾರಂಭ ಹಾಗೂ ಹಬ್ಬದ ಶುಭ ಸಂದರ್ಭದಲ್ಲಿ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಮೈಸೂರು ನಗರ ಮತ್ತು ಸುತ್ತಮುತ್ತಲಿನ ನಾಗರೀಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಈ ಮೇಳದ ಮೂಲಕ ಅಣುವು ಮಾಡಿಕೊಡಲಾಗಿದೆ ಎಂದರು.
ಹೇಮಲತಾ ಜಗದೀಶ್, ಆರತಿ ಸೋಮಯ್ಯ, ಗಾಯತ್ರಿ ಜವರೇಗೌಡ, ಚೈತ್ರಾ ರಂಗಸ್ವಾಮಿ, ಆರಾಧನಾ, ಆಶಾ ದಿವ್ಯೇಶ್, ಹೇಮಾಮಾಲಿನಿ ಲಕ್ಷ್ಮಣ್, ಪಲ್ಲವಿ ಸಿ.ಟಿ.ರವಿ, ನಿರ್ಮಲಾ ಇನ್ನಿತರರು ಉಪಸ್ಥಿತರಿದ್ದರು.