ಕೆಂಪೇಗೌಡ ಅವರ ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿ
ಮಾಲೂರು ಜೂನ್ ೨೯: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಆದರ್ಶಗಳು ಪ್ರತಿಯೊಬ್ಬ ನಾಗರಿಕನಿಗೂ ಹಾಗೂ ಚುನಾಯಿತ ಜನಪ್ರತಿನಿಧಿಗೂ ಮಾದರಿಯಾಗಿದೆ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ವಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಅವರ ೫೧೫ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಮುಖ್ಯರಸ್ತೆಯ ಕೆಂಪೇಗೌಡ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಅವರಿಗೆ ಮಾಲಾರ್ಪಣೆ ಸಲ್ಲಿಸಿ ನಾಡಪ್ರಭು ಕೆಂಪೇಗೌಡ ಅವರ ಭವ್ಯ ಮೆರವಣಿಗೆಯ ಪಲ್ಲಕ್ಕಿ ಉತ್ಸವಗಳಿಗೆ ಚಾಲನೆ ನೀಡಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ನಗರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ, ಅವರ ಕಾಲಘಟ್ಟದಲ್ಲಿ ಕೆರೆಗಳು, ರಸ್ತೆಗಳು, ಗುಡಿ ಗೋಪುರಗಳನ್ನು ನಿರ್ಮಿಸಿ ಜನ ಮೆಚ್ಚಿದ ನಾಯಕನಾಗಿ ಆಡಳಿತ ನೀಡಿದ್ದಾರೆ. ಬೆಂಗಳೂರು ನಗರ ಅಭಿವೃದ್ಧಿ ಸೇರಿದಂತೆ ಸಾಮಾಜಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಅದರ ಫಲವಾಗಿ ಇಂದು ಬೆಂಗಳೂರು ನಗರ ಬೃಹದಕಾರವಾಗಿ ಬೆಳೆದು ಸಿಲಿಕಾನ್ ಸಿಟಿಯಾಗಿ ನಿಂತಿದೆ. ಅಂದಿನ ಕಾಲದಲ್ಲಿ ಅವರ ಸೇವೆ ಪ್ರತಿಯೊಬ್ಬರು ಸ್ಮರಿಸಬೇಕಾದದು ಅವರ ವಂಶಸ್ಥರಾದ ಒಕ್ಕಲಿಗ ಸಮಾಜದವರು ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಒಕ್ಕಲಿಗ ಸಮಾಜದವರು ಕೃಷಿಯನ್ನು ಅವಲಂಬಿಸಿದ್ದು, ಎಲ್ಲಾ ಜಾತಿ ಜನಾಂಗ ಧರ್ಮ ದವರನ್ನು ಒಗ್ಗಟ್ಟಾಗಿ ಕರೆದೊಯ್ಯುವ ಮೂಲಕ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ, ಇಂತಹ ಒಕ್ಕಲಿಗ ಸಮಾಜದಲ್ಲಿ ಹುಟ್ಟಿರುವುದು ನನಗೆ ಹೆಮ್ಮೆ ಎನಿಸಿದೆ ಎಲ್ಲಾ ಜಾತಿ ಜನಾಂಗಗಳ ಸಹಕಾರದಿಂದ ತಾಲೂಕಿನಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಯಿತು. ತಾಲೂಕಿನ ಜನತೆಯ ಋಣ ತೀರಿಸಲು ಎಲ್ಲಾ ಜಾತಿ ಜನಾಂಗಗಳನ್ನು ಒಗ್ಗಟ್ಟಾಗಿ ಕರೆದೊಯ್ಯುವ ಮೂಲಕ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ನೀಡಲಾಗುವುದುಎಂದರು.
ನಾಡಪ್ರಭು ಕೆಂಪೇಗೌಡ ಅವರ ಭವ್ಯ ಮೆರವಣಿಗೆಯು ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಕೆ ರಮೇಶ್, ತಾಪಂ ಇ ಒ ಕೃಷ್ಣಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಅನಂತ್ ಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಪುರಸಭಾ ಸದಸ್ಯರಾದ ಪಿ.ಎನ್.ಪರಮೇಶ್, ಎ.ರಾಜಪ್ಪ, ಜಾಕಿರ್ ಖಾನ್, ಇಮ್ತಿಯಾಜ್ ಖಾನ್, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ವಿಜಯನಸಿಂಹ, ವಕ್ಕಲಿಗ ಸಮುದಾಯದ ಮುಖಂಡರುಗಳಾದ ಕೆ.ಎಸ್. ವೆಂಕಟೇಶ್‌ಗೌಡ, ಈರಣ್ಣ, ಆಂಜಿನಪ್ಪ, ದಿನೇಶ್ ಗೌಡ, ಪ್ರಗತಿ ಶ್ರೀನಿವಾಸ್, ಪತ್ರಕರ್ತ ಸಂಘದ ತಾ.ಅಧ್ಯಕ್ಷ ಡಿ.ಎಂ.ವಿಜಯ್ ಕುಮಾರ್, ಸತೀಶ್, ಸುನಿಲ್ ನಂಜೇಗೌಡ, ಬೆಳ್ಳಾವಿ ಸೋಮಣ್ಣ, ಹರೀಶ್‌ಗೌಡ, ಲಕ್ಷ್ಮೀನಾರಾಯಣ, ಮಿಂಡಹಳ್ಳಿ ಮುನೇಗೌಡ, ರಾಘವೇಂದ್ರ, ಸಂಪತ್, ಬಾಳಿಗಾನಹಳ್ಳಿ, ಶ್ರೀನಿವಾಸ್, ಹರೀಶ್, ವಿವಿಧ ಇಲಾಖೆಯ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ಬಿಇಒ ಚಂದ್ರಕಲಾ, ಇನ್ಸ್‌ಪೆಕ್ಟರ್ ವಸಂತ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.