ಗೌಡರಿಗೆ ಸಿಗದ ಆಹ್ವಾನ ಜೆಡಿಎಸ್-ಕಾಂಗ್ರೆಸ್ ನಡುವೆ ಜಟಾಪಟಿ
ಕೋಲಾರ,ಜೂ,೨೯-ನಗರದ ಜಿಲ್ಲಾ ಒಕ್ಕಲಿಗರ ಸಂಘದ ನೇತ್ರತ್ವದಲ್ಲಿ ನಡೆದ ನಾಡಪ್ರಭು ೧೧೫ನೇ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಜೆ.ಡಿ.ಎಸ್. ಪಕ್ಷದಲ್ಲಿ ಗುರುತಿಸಿ ಕೊಂಡಿದ್ದ ಮುಖಂಡರು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರವು ಒಕ್ಕಲಿಗರ ಸಮುದಾಯದ ರಾಷ್ಟ್ರ ನಾಯಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಹಾಗೂ ರಾಜ್ಯದ ಮಾಜಿ ಮುಖ್ಯ ಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದ ವಿರುದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ದ ಘೋಷಣೆಗಳು ಕೊಗುವ ಮೂಲಕ ಕಾರ್ಯಕ್ರಮದಲ್ಲಿ ಗೊಂದಲ ಉಂಟು ಮಾಡಿದರು,
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ಪ್ರತಿಕ್ರಿಯಿಸಿ ಇದು ಕೆಂಪೇಗೌಡರ ಜಯಂತಿ ಪಕ್ಷಾತೀತವಾಗಿ ಭಾಗವಹಿಸಿದ್ದೇವೆ ಈ ಸಂದರ್ಭದಲ್ಲಿ ರಾಜಕೀಯ ಮಾಡಲು ಬರಬೇಡಿ ಎಂಬ ಮನವಿಗೆ ಸ್ಪಂದಿಸದೆ ಸಿದ್ದರಾಮಯ್ಯ ವಿರುದ್ದ ಹಾಗೂ ದೇವೇಗೌಡರು ಮತ್ತು ಕುಮಾರಸ್ವಾಮಿ ಪರ ಘೋಷಣೆಗಳು ಕೊಗಿದಾಗ ಅನಿಲ್ ಕುಮಾರ್ ಅವರು ಕಿಡಿಕಾರುತ್ತಾ ರಾಜಕಾರಣ ಮಾಡಲು ನಮಗೂ ಬರುತ್ತದೆ ಎಂದು ಎಚ್ಚರಿಸಿದರು,
ನಂತರದಲ್ಲಿ ವೇದಿಕೆಯಲ್ಲಿದ್ದ ಸಿ.ಎಂ.ಆರ್. ಶ್ರೀನಾಥ್, ವಕ್ಕಲೇರಿ ರಾಮ, ಆದಿಚುಂಚನಗಿರಿ ಮಂಗಳನಂದನಾಥ್ ಸ್ವಾಮೀಜಿಯವರು ಮಧ್ಯ ಪ್ರವೇಶಿಸಿ ಸಮಾಧಮ ಪಡೆಸಿದರು, ಪೊಲೀಸರು ಕೊಡಲೇ ಘೋಷಣೆ ಕೊಗುತ್ತಿದ್ದವರು ಕಾರ್ಯಕ್ರಮದಿಂದ ಹೊರಗೆ ಕರೆದೂಯ್ದ ಪ್ರಕರಣ ನಡೆಯಿತು,
ಈ ಸಂದರ್ಭದಲ್ಲಿ ಕೆಲಕಾಲ ಗೊಂದಲ ಹಾಗೂ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು, ವೇದಿಕೆ ಮೇಲಿದ್ದ ಅನಿಲ್ ಕುಮಾರ್ ಬೆಂಬಲಿಗರು ಹಾಗೂ ಜೆ.ಡಿ.ಎಸ್. ಗುಂಪು ನಡುವೇ ತಳ್ಳಾಟ, ನೊಕಾಟ ನಡೆದಾಗ ಪೊಲೀಸರು ಎರಡು ಗುಂಪುಗಳನ್ನು ಚದುರಿಸುವ ಮೂಲಕ ಉಂಟಾಗ ಬಹುದಾದ ಘರ್ಷಣೆಯನ್ನು ತಪ್ಪಿಸಿದರು,