ಕೆಂಪೇಗೌಡರ ಆಡಳಿತ ಮೇಕಿನ್ ಕರ್ನಾಟಕಕ್ಕೆ ಸ್ಫೂರ್ತಿ
ಮುಳಬಾಗಿಲುಜೂ.೨೯- ಶದಲ್ಲಿ ಹಲವಾರು ರಾಜ ಮಹಾರಾಜರು ಆಳ್ವಿಕೆ ನಡೆಸಿ ಮನೆಮಾತಾಗಿದ್ದು ವಿಜಯನಗರದ ಸಾಮ್ರಾಜ್ಯಕ್ಕೆ ನಿಷ್ಠ ಸಮಂತರಾಗಿದ್ದ ರಾಜರಾಗಿದ್ದ ಯಲಹಂಕ ನಾಡಪ್ರಭು ಕೆಂಪೇಗೌಡ ರವರ ದೂರದೃಷ್ಟಿ ಆಡಳಿತ ಮೇಕಿನ್ ಕರ್ನಾಟಕಕ್ಕೆ, ಮೇಕಿನ್ ಭಾರತ ಸ್ಪೂರ್ತಿದಾಯಕವಾಗಿತ್ತು ಎಂದು ತಹಸಿಲ್ದಾರ್ ಬಿ. ಎಸ್. ವೆಂಕಟಾಚಲಪತಿ ಅಭಿಮತ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ವತಿಯಿಂದ ತಹಸೀಲ್ದಾರ್ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಪರಿಣಾಮ ಇಂದು ಬೃಹತ್ ಬೆಂಗಳೂರು ಮಹಾನಗರವಾಗಿ ಬೆಳೆಯುತ್ತಿದ್ದು ಇಡೀ ವಿಶ್ವವೇ ಬೆಂಗಳೂರು ಕಡೆಗೆ ತಿರುಗಿ ನೋಡುವಂತ ಹೆಗ್ಗಳಿಕೆ ನಾಡಿಗೆ ಸಿಕ್ಕಲು ನಾಡಪ್ರಭುಗಳ ಕೊಡುಗೆ ಅಪಾರವಾಗಿದೆ ಎಂದರು.
ತಾ. ಪಂ. ಇ. ಒ. ಡಾ. ಕೆ. ಸರ್ವಿಸ್ ಮಾತನಾಡಿ ಕೆಂಪೇಗೌಡರು ನಾಡನ್ನು ಕಟ್ಟಲು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ ಕೆರೆಕುಂಟೆಗಳನ್ನು ನಿರ್ಮಿಸಿ, ಗಿಡಮರಗಳನ್ನು ಬೆಳೆಸಿ , ಗುಡಿ ಗೋಪುರಗಳನ್ನು ಕಟ್ಟಿಸಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ದೂರದೃಷ್ಟಿ ಇರುವ ಮಹಾನ್ ದಾರ್ಶನಿಕರಾಗಿದ್ದಾರೆ ಅವರ ಜಯಂತಿ ಸಮಾಜಕ್ಕೆ ಪೂರಕವಾದ ಚಟುವಟಿಕೆಗಳು ಹಮ್ಮಿಕೊಳ್ಳಲು ಪ್ರೇರಣೆಯಾಗಲಿ ಎಂದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಅಲಂಗೂರು ಶಿವಣ್ಣ ಮಾತನಾಡಿ ಶೀಘ್ರದಲ್ಲೇ ತಾಲೂಕು ಆಡಳಿತದ ಸಹಯೋಗದೊಂದಿಗೆ ಒಕ್ಕಲಿಗರ ಸಂಘದಿಂದ ಬೃಹತ್ ಮಟ್ಟದ ನಾಡಪ್ರಭು ಕೆಂಪೇಗೌಡರ ಜಯಂತಿ ಹಮ್ಮಿಕೊಳ್ಳಲಾಗುವುದು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ಎಲ್ಲಾ ವರ್ಗದ, ಎಲ್ಲಾ ಸಮಾಜದ ಸಂಘ ಸಂಸ್ಥೆ ಮುಖಂಡರುಗಳು ಪಾಲ್ಗೊಳ್ಳುವ ಮೂಲಕ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣವನ್ನು ಮುಳಬಾಗಿಲು ನಗರದ ಹೃದಯ ಭಾಗದಲ್ಲಿ ಅನಾವರಣಗೊಳಿಸುವ ಮೂಲಕ ಬೆಂಗಳೂರಿನಂತೆ ಮುಳಬಾಗಿಲು ಅಭಿವೃದ್ಧಿಪಥದತ್ತ ಸಾಗಲು ಎಲ್ಲರೂ ಶ್ರಮಿಸೋಣ ಎಂದು ಆಶಿಸಿದರು.
ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಅವರ ಫೋಟೋಗೆ ಪೂಜೆ ಸಲ್ಲಿಸಿ ಪಾಲ್ಗೊಂಡವರಿಗೆ ತಾಲೂಕು ಆಡಳಿತದಿಂದ ಸಿಹಿ ವಿತರಣೆ ಮಾಡಲಾಯಿತು .
ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಆರ್. ಆರ್. ರಾಜೇಂದ್ರ ಗೌಡ, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ವಿ. ರಘುಪತಿ ರೆಡ್ಡಿ, ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ನಾಗರಾಜ್, ಪದಾಧಿಕಾರಿಗಳಾದ ಎಸ್. ಎನ್. ರಘುಪತಿ ಗೌಡ, ಕೆ. ಎಂ. ರವಿ, ಡಿ. ವಿ. ರಘುಪತಿ ಗೌಡ, ಎನ್. ಆರ್. ಸತ್ಯಣ್ಣ, ಗಿರೀಶ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಿಕ್ಕನಹಳ್ಳಿ ಸಿ. ಆರ್. ಶಿವರಾಜ್ ಸೇರಿದಂತೆ ಅನೇಕ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.