ಕೌಶಲ್ಯ ಸ್ಪರ್ಧೆಯಲ್ಲಿ ಜಿಟಿಟಿಸಿ ವಿದ್ಯಾರ್ಥಿಗಳ ಸಾಧನೆ
ಗೌರಿಬಿದನೂರು.ಜೂ.೨೯- ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕೌಶಲ್ಯ ಸ್ಪರ್ಧೆಯಲ್ಲಿ ಗೌರಿಬಿದನೂರಿನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ವಿದ್ಯಾರ್ಥಿಗಳು ಮೂರು ಪದಕಗಳನ್ನು ಪಡೆದಿರುತ್ತಾರೆ.
ಗೌರಿಬಿದನೂರು ಜಿಟಿಟಿಸಿ ಕೇಂದ್ರದ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ೧೪ ಪದಕಗಳನ್ನು ಪಡೆದಿದ್ದು, ಅದರಲ್ಲಿ ಜಿಟಿಟಿಸಿ ಅಂತಿಮ ವರ್ಷದ ಡಿಪ್ಲೋಮೋ ಇನ್ ಮೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ಮೂರು ಪದಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಎಲೆಕ್ಟ್ರಿಕಲ್ ಇನ್ಸ್ಟಾಲೇಶನ್ ವಿಭಾಗದಲ್ಲಿ ಧನುಷ್ ಎಂಬ ವಿದ್ಯಾರ್ಥಿಯು ಬೆಳ್ಳಿ ಪದಕ ಹಾಗೂ ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ಭರತ್ ರೆಡ್ಡಿ ಮತ್ತು ಗಿರಿಪ್ರಸಾದ್ ಕಂಚಿನ ಪದಕ ಗಳಿಸಿದ್ದಾರೆ. ಇದಲ್ಲದೆ ಎಂ.ಆರ್.ಪವನ್, ಬಿ.ಆರ್.ಕುಮಾರಲಿಂಗಣ್ಣ ಮತ್ತು ಮುಜಾಹಿದ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರಾಗಿ ಪದಕಗಳನ್ನು ಪಡೆದ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಜಿಟಿಟಿಸಿ ಗೌರಿಬಿದನೂರು ಕೇಂದ್ರದ ಘಟಕ ಮುಖ್ಯಸ್ಥರು, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.