ಮೇದರ ದೊಡ್ಡಿ ಗ್ರಾಮಕ್ಕೆ ಬಸ್ಸ್ ಸೌಲಭ್ಯ
ಕನಕಪುರ.ಜೂ.೨೯-ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಚಿಕ್ಕಮುದುವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇದರ ದೊಡ್ಡಿ ಗ್ರಾಮಕ್ಕೆ ರಾಜ್ಯ ರಸ್ತೆಸಾರಿಗೆ ಸಂಸ್ಥೆಯವತಿಯಿಂದ ಬಸ್ಸ್ ಸೌಲಭ್ಯ್ ಕಲ್ಪಿಸಲಾಯಿತು.
ಇದೇ ಪ್ರಥಮ ಬಾರಿಗೆ ತಮ್ಮ ಗ್ರಾಮಕ್ಕೆ ಬಸ್ಸ್ಸ್ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಡಗರದಿಂದ ಬಸ್ಸನ್ನು ಸಿಂಗಾರಗೊಳಿಸಿ ಪೂಜೆ ಸಲ್ಲಿಸಿದರು.
ಚಿಕ್ಕಮುದುವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಕುಟುಂಬಗಳಿದ್ದು ಇಲ್ಲಿಯವರೆಗೆ ಈ ಗ್ರಾಮಕ್ಕೆ ಸಾರಿಗೆ ಸಂಪರ್ಕ ವಿರಲಿಲ್ಲವಾಗಿತ್ತು. ಪರಿಶಿಷ್ಠಜಾತಿ ಮತ್ತು ಪಂಗಡದ ಜನಾಂಗವು ವಾಸವಿರುವ ಈ ಗ್ರಾಮದಲ್ಲಿ ಇಲ್ಲಿನ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬರಬೇಕಾದರೆ ಹಾಗೂ ಬೆಟ್ಟಗುಡ್ಡಗಳ ನಡುವೆ ಇರುವ ಈ ಗ್ರಾಮಸ್ಥರು ಕಾಡುಪ್ರಾಣಿಗಳ ಆವಳಿಯನ್ನು ಎದುರಿಸಬೇಕಾಗಿತ್ತು. ಹಾಗೆಯೇ ಜೀವನೋಪಾಯಕ್ಕಾಗಿ ಬರಬೇಕಾದರೆ ನಡೆದುಕೊಂಡು ಬರುವ ಸ್ಥಿತಿ ಇತ್ತು.
ಇಂತಹ ಕ್ಲಿಷ್ಟ ಪರಿಸ್ಥಿತಿಯು ಇಲಾಖೆಯ ಗಮನಕ್ಕೆ ಬಂದ ತಕ್ಷಣ ಕನಕಪುರ ಕೆಎಸ್‌ಆರ್ ಟಿಸಿ ಮ್ಯಾನೇಜರ್ ನಾಗರಾಜಪ್ಪನವರು ಕೂಡಲೇ ಸಾರಿಗೆ ಸಂಪರ್ಕವನ್ನು ಕಲ್ಪಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎನ್. ದಿಲೀಪ್ ರವರು ನಮ್ಮ ನಾಯಕರಾದ ಡಿ.ಕೆ. ಸುರೇಶ್‌ರವರ ಮನವಿಯ ಮೇರೆಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಬಸ್ಸ್ ಸೌಲಭ್ಯ ಕಲ್ಪಿಸಿದ್ದಾರೆ. ಗ್ರಾಮಕ್ಕೆ ಬಸ್ ಬರಲು ಚಿಕ್ಕದಾಗಿದ ರಸ್ತೆ ಇತ್ತು ಹಾಗೆಯೇ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ವಿದ್ಯುತ್ ಕಂಬಗಳನ್ನು ತೆರವು ಗೊಳಿಸಲು ನಮ್ಮ ನಾಯಕರು ಇಲಾಖೆಗೆ ಪತ್ರವ್ಯವಹಾರ ನಡೆಸಿ ಸುಗಮವಾಗಿ ಬಸ್ಸ್ ಬರುವಂತೆ ಆಗಲು ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆಯಲ್ಲಿ ಈ ದಿನ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಗ್ರಾಮಸ್ಥರು ಸೇರಿದಂತೆ ಜನಪ್ರತಿನಿಗಳಾದ ಕನಕಪುರ ನಗರಸಭೆ ಮಾಜಿ ಅಧ್ಯಕ್ಷರಾದ ಕೆ.ಎನ್. ದಿಲೀಪ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ವೆಂಕಟೇಶಯ್ಯ, ಚಿಕ್ಕಮುದುವಾಡಿ ಗ್ರಾಮಪಂಚಾಯತಿ ಅಧ್ಯಕ್ಷರಾದ ನಿಂಗಣ್ಣ, ಜೆಡಿಎಸ್ ಮುಖಂಡರಾದ ಕೊತ್ತನೂರು ನಾರಾಯಣ್, ಕಾಂಗ್ರೆಸ್ ಮುಖಂಡರಾದಕೊಂತಿಕಾಳ್ ದೊಡ್ಡಿ ಬಸವರಾಜು, ಅಳ್ಳಿಮಾರನಹಳ್ಳಿಯ ಮೂರ್ತಿ, ಕೇಬಲ್ ದಾಸ ಉಪಸ್ಥಿತರಿದ್ದರು.