ರಾಷ್ಟ್ರಪತಿ, ಪ್ರಧಾನಿಗೆ ಶುಭ ಹಾರೈಸಿದ ಸಂಸದ ಸುಧಾಕರ್
ಚಿಕ್ಕಬಳ್ಳಾಪುರ.ಜೂ.೨೯- ಲೋಕಸಭಾ ಸದಸ್ಯ ಡಾಕ್ಟರ್ ಕೆ. ಸುಧಾಕರ್ ಅವರು ನಿನ್ನೆ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಹಾಗೂ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಶುಭ ಹಾರೈಸಿದರು.ನವದೆಹಲಿಯಲ್ಲಿ ನಿನ್ನೆ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸತ್ತಿಗೆ ತೆರಳಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿ ಅವರನ್ನು ಸಂಸದ ಡಾ.ಕೆ ಸುಧಾಕರ್ ಭೇಟಿ ಮಾಡಿ ಹೂಗುಚ್ಛ ನೀಡಿ ಮೈಸೂರು ಪೇಟ ತೊಡಿಸಿ ಸತ್ಕಾರ ಮಾಡಿದರು.
ನಂತರ ಸಂಸದ ಡಾ. ಕೆ ಸುಧಾಕರ್ ಅವರು ಘನತೆ ವೇತ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಅವರಿಗೂ ಸಹ ಹೋಗುವ ನೀಡಿ ತಮ್ಮ ಗೌರವ ಸೂಚಿಸಿದರು. ಇತ್ತೀಚಿಗ ನಡೆದ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಅತ್ಯಂತ ಪ್ರತಿಷ್ಠೆಯ ಕ್ಷೇತ್ರವೆಂದು ಪರಿಗಣಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಮೈತ್ರಿಕೂಟದ ಎನ್.ಡಿ.ಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾಕ್ಟರ್ ಕೆ. ಸುಧಾಕರ್ ಅವರು ಅದ್ಭುತ ಒಂದು ಲಕ್ಷ ಅರವತ್ತು ಮೂರು ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿತು ವಿಶೇಷವಾಗಿ ದೆಹಲಿಯ ಭಾರತೀಯ ಜನತಾ ಪಕ್ಷದ ವರಿಷ್ಠರ ಗಮನವನ್ನು ಸೆಳೆದಿದ್ದು ಈ ಸಂದರ್ಭದಲ್ಲಿ ನಾವು ಸ್ಮರಿಸಬಹುದಾಗಿದೆ.
ಚಿಕ್ಕಬಳ್ಳಾಪುರದಲ್ಲಿ ನಾಳೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎನ್.ಡಿ.ಎ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಸಚಿವ ಡಾಕ್ಟರ್ ಕೆ ಸುಧಾಕರ್ ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಿಂದ ಎನ್.ಡಿ.ಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮಲ್ಲೇಶ್ ಬಾಬು ಅವರುಗಳನ್ನು ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಗೌರವ ಸನ್ಮಾನ ನೀಡಲಾಗುವುದು ಎಂದು ಜಿಲ್ಲಾ ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಮುಖಂಡರುಗಳು ತಮ್ಮ ಅಭಿಪ್ರಾಯವನ್ನು ಸಂಜೆವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.