ಉಪಲೋಕಾಯುಕ್ತರಾಗಿ ನ್ಯಾ. ಬಿ.ವೀರಪ್ಪ ನೇಮಕ ಸ್ವಾಗತಾರ್ಹ
ಕೋಲಾರ,ಜೂ,೨೯- ಕರ್ನಾಟಕ ರಾಜ್ಯದ ಪ್ರತಿಷ್ಠಿತ ಲೋಕಾಯುಕ್ತ ಸಂಸ್ಥೆಗೆ ಉಪಲೋಕಾಯುಕ್ತರಾಗಿ ನ್ಯಾಯಮೂರ್ತಿ ಬಿ.ವೀರಪ್ಪ ಅವರನ್ನು ನೇಮಕ ಮಾಡಿರುವುzನ್ನು ಸಾಮಾಜಿಕ ಕಾರ್ಯಕರ್ತ ಗೌರಿಪೇಟೆಯ ಕೆ.ಎನ್.ರವೀಂದ್ರನಾಥ್ ಸ್ವಾಗತಿಸಿದ್ದಾರೆ.
ಲೋಕಾಯುಕ್ತ ಸಂಸ್ಥೆಗೆ ಖ್ಯಾತಿ ಹಾಗೂ ಐಡೆಂಟಿಟಿಯನ್ನು ತಂದು ಕೊಟ್ಟಂತಹ ವೆಂಕಟಾಚಲಯ್ಯನವರು ಕೋಲಾರ ಜಿಲ್ಲೆಗೆ ಸೇರಿದವರಾಗಿದ್ದು, ಕೋಲಾರ ಜಿಲ್ಲೆಗೆ ಸಂದ ಕೀರ್ತಿಯಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಾಗದೇನಹಳ್ಳಿ ಗ್ರಾಮದವರಾದ ನ್ಯಾಯಮೂರ್ತಿ ವೀರಪ್ಪನವರ ಅಧಿಕಾರಾವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯ ಗತವೈಭವ ಮರುಕಳಿಸಿದೆ ಎಂದು ಅಭಿಪ್ರಾಯಿಸಿದ್ದಾರೆ.
ಖಡಕ್ ವ್ಯಕ್ತಿತ್ವದ ನ್ಯಾಯಮೂರ್ತಿ ವೀರಪ್ಪನವರನ್ನು ಗುರುತಿಸಿ ಲೋಕಾಯುಕ್ತ ಸ್ಥಾನಕ್ಕೆ ನೇಮಕ ಮಾಡಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರವೀಂದ್ರನಾಥ್ ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.