ಬೂಸ್ಟರಿಂಗ್ ಯೋಜನೆಯಡಿ ಹಲವು ಕಾರ್ಯಕ್ರಮ
ಕೋಲಾರ,ಜೂ.೨೯- ಎಸ್.ಎಂ. ಸೆಹಗಲ್ ಫೌಂಡೇಶನ್ ಕಳೆದ ಮೂರು ವರ್ಷಗಳಿಂದ ಬೂಸ್ಟರಿಂಗ್ ಎಫ್.ಪಿ.ಓ ಎಂಬ ಯೋಜನೆಯಡಿ ಅನೇಕ ಕಾರ್ಯ ಕ್ರಮಗಳನ್ನು ಕೈಗೊಂಡಿದೆ.
ಇದರ ಭಾಗವಾಗಿ ಎಫ್.ಪಿ.ಓ ನಿರ್ದೇಶಕ ಮಂಡಳಿಯ ಬಲವರ್ಧನೆಗಾಗಿ ೨ ದಿನಗಳ ತರಬೇತಿ ಕಾರ್ಯಕ್ರಮನ್ನು ಕೆ.ವಿ.ಕೆ ಟಮಕ ಅಲ್ಲಿ ಹಮ್ಮಿಕೊಳ್ಳಲಾಗಿತ್ತು.ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳ ಸಹಾಯದೊಂದಿಗೆ ಆಯೋಜಿಸಲಾಗಿತ್ತು.
ನಿರ್ದೇಶರ ಹಾಗೂ ಸಿಇಓ ಗಳ ಪಾತ್ರ ಮತ್ತು ಜವಾಬ್ದಾರಿಗಳು, ಬೆಳೆ ಉತ್ಪಾದನೆಯಲ್ಲಿ ಷೇರುದಾರರಾಗಿರುವ ಹಾಗೂ ಸಾಮಾನ್ಯ ರೈತರಿಗೂ ಇರುವ ವ್ಯತ್ಯಾಸಗಳು, ಸಾಮೂಹಿಕವಾಗಿ ಕೆಲಸ ಮಾಡುವುದರಿಂದ ಆಗುವ ಅನುಕೂಲಗಳು, ಕಾನೂನಾತ್ಮಕ ಅನುಸರಣೆಯ ಕ್ಯಾಲೆಂಡರ್ ತಯಾರಿಸುವುದು, ಬಿಓಡಿ ಮತ್ತು ಎಜಿಎಂ ಸಭೆಗಳಲ್ಲಿ ಅನುಸರಿಸಬೇಕಾದ ಕ್ರಮಗಳು ಹೀಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಹಾಗೆಯೇ ಅನೇಕ ಕ್ರಿಯಾ ಯೋಜನೆಗಳನ್ನು ಸಹ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ೮ ಎಫ್.ಪಿಓಗಳ ಸದಸ್ಯರು ಸಿ.ಇ.ಓ ಹಾಗೂ ಸೆಹಗಲ್ ಫೌಂಡೇಶನ್‌ನ ಸಿಬ್ಬಂದಿಗಳು ಹಾಜರಿದ್ದರು