ಕೆಂಪೇಗೌಡ ಜಯಂತಿ ಆಚರಣೆ
ಕೋಲಾರ,ಜೂ.೨೯- ನಗರದಲ್ಲಿರುವ ಸಾಮಾಜಿಕ ನ್ಯಾಯ ಸೇವಾ ಸಮಿತಿಯ ಜಿಲ್ಲಾ ಕಛೇರಿಯಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ೫೧೫ನೇ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಸಿಹಿ ಹಂಚಿ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಮಿತಿಯ ರಾಜ್ಯಾಧ್ಯಕ್ಷ ಮತ್ತು ರಾಷ್ಟ್ರ ಸಂಚಾಲಕ ಪಿಲ್ಲರ್ ಮಂಜು ಮಾತನಾಡಿ, ನಮ್ಮ ನಾಡಿನಪ್ರಭುಗಳು ಸರ್ವಧರ್ಮ ಸಹಬಾಳ್ವತೆದಿಂದ ನಡೆದುಕೊಂಡವರು, ಕೆರೆ ಮತ್ತು ಅಣೆಕಟ್ಟುಗಳು ಮತ್ತು ಗುಡಿ ಗೋಪುರಗಳು ಹಾಗೂ ಪೇಟೆಗಳನ್ನು ನಿರ್ಮಿಸಿದವರು ಜನತೆಯ ಸ್ವಾವಲಂಭಿ ಬದುಕಿಗೆ ಮಾರ್ಗದರ್ಶಕರಾದವರು, ಕೆಂಪೇಗೌಡರು ಅಂದಿನ ಬೆಂದಕಾಳೂರು ಗ್ರಾಮಾಂತರವನ್ನು ಇಂದು ಬೆಂಗಳೂರು ಮಹಾನಗರಿಯನ್ನಾಗಿ ಪರಿವರ್ತನೆಯಾಗಲು ಅವರ ಪ್ರಾಥಮಿಕ ಪರಿಶ್ರಮವೇ ಕಾರಣ, ಇಡೀ ಜಗತ್ತಕ್ಕೆ ಪ್ರಚಲಿತಗೊಂಡ ಬೆಂಗಳೂರು ನಗರವನ್ನಾಗಿಸಿದ ಮಹತ್ವ ಪಾತ್ರ ಮತ್ತು ಕೀರ್ತಿ ಶ್ರೀಮಾನ್ ಕೆಂಪೇಗೌಡರಿಗೆ ಸಲ್ಲುತ್ತದೆ. ಈಗಿನ ಯುವ ಸಮೂಹ ಇಂತಹ ಮಹಾಚೇತನರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಚಾರ ಒಕ್ಕೂಟದ ಜಿಲ್ಲಾ ಕಾರ್ಯಧ್ಯಕ್ಷ ಎಂ.ಸುಬ್ರಮಣಿ, ಕಾರ್ಮಿಕ ಒಕ್ಕೂಟದ ಉಪಾಧ್ಯಕ್ಷ ಎ.ವೆಂಕಟೇಶ್‌ಗೌಡ, ಮಾನವ ಹಕ್ಕುಗಳ ಸಂರಕ್ಷಣ ಒಕ್ಕೂಟದ ರಾಜ್ಯಾಧ್ಯಕ್ಷ ಜಮೀರ್ ಪಾಷಾ, ಸದಸ್ಯರಾದ ಸೈಯದ್ ಶಬ್ಬೀರ್, ರಾಘವೇಂದ್ರ ಎಂ, ಶ್ರೀನಿವಾಸಗೌಡ, ವೆಂಕಟೇಶ್ ಹಾಗೂ ಇತರರು ಭಾಗವಹಿಸಿದ್ದರು.