ಜಿಟಿಟಿಸಿಯಲ್ಲಿ ೨ ಹೊಸ ಕೋರ್ಸ್‌ಗೆ ದಾಖಲಾಗಲು ಅವಕಾಶ
ತುಮಕೂರು, ಜೂ. ೨೯- ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಡಿಪ್ಲೊಮೋ ಇನ್ ಡೈ ಮೇಕಿಂಗ್, ಡಿಪ್ಲೋಮೋ ಇನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಡಿಪ್ಲೋಮೋ ಇನ್ ಮೆಕಟ್ರಾನಿಕ್ಸ್ ಕೋರ್ಸ್‌ಗಳಿಗೆ ಸೇರಲು ಅವಕಾಶವಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಟಿಸಿಸಿ ಉಪನ್ಯಾಸಕರಾದ ಚೇತನ್, ಅಭಿಷೇಕ, ಹೇಮಂತ್ ತಿಳಿಸಿದರು.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇವರುಗಳು, ತುಮಕೂರು ಜಿಟಿಟಿಸಿಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಡಿಪ್ಲೋಮೋ ಇನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಡಿಪ್ಲೋಮೋ ಇನ್ ಮೆಕಟ್ರಾನಿಕ್ಸ್ ಎಂಬ ಎರಡು ಹೊಸ ಕೋರ್ಸುಗಳನ್ನು ತಂದಿದ್ದು, ಶೇ. ೯ ರಷ್ಟು ಸೀಟುಗಳು ಭರ್ತಿಯಾಗಿವೆ. ಮೂವತ್ತು ಸೀಟುಗಳು ಮಾತ್ರ ಬಾಕಿಯಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯಲ್ಲಿ ಪಾಸಾದ ಮತ್ತು ದ್ವಿತೀಯ ಪಿಯು ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ ಅನ್ನುತ್ತೀರ್ಣಗೊಂಡ ವಿದ್ಯಾರ್ಥಿಗಳು ಡಿಪ್ಲೋಮಾ ಮೊದಲ ವರ್ಷಕ್ಕೆ ಸೇರ್ಪಡೆಗೊಳ್ಳಬಹುದು ಎಂದರು.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಾಸಾದ ವಿದ್ಯಾರ್ಥಿಗಳು ಡಿಪ್ಲೋಮೋದಲ್ಲಿ ಎರಡನೇ ವರ್ಷಕ್ಕೆ ಸೇರ್ಪಡೆಗೆ ಅವಕಾಶವಿದೆ. ಅಲ್ಲದೆ ಐಟಿಐ ಪಿಟ್ಟರ್, ಟರ್ನರ್ ಮತ್ತು ಡ್ರಾಫ್ಟ್ ಮನ್ ಪಾಸಾದವರು ಸಹ ಡಿಪ್ಲೋಮೋ ಎರಡನೇ ವರ್ಷಕ್ಕೆ ಸೇರ್ಪಡೆಗೊಳ್ಳಲು ಅವಕಾಶವಿದೆ. ಮೊದಲು ಬಂದವರಿಗೆ ಮೊದಲ ಅದ್ಯತೆ ಎಂಬ ನಿಯಮದಡಿ ಉಳಿದಿರುವ ಸೀಟುಗಳ ಭರ್ತಿಗೆ ಮುಂದಾಗಿದ್ದು, ಜೂ.೩೦ ಕೊನೆಯ ದಿನವಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಜಿಟಿಟಿಸಿಯಿಂದ ನಡೆಯುತ್ತಿರುವ ಡಿಪ್ಲೋಮೊ ಕೋರ್ಸಗಳು ಮೂರು ವರ್ಷದ ಪ್ರಾಕ್ಟಿಕಲ್ ಮತ್ತು ಒಂದು ವರ್ಷದ ಕೈಗಾರಿಕಾ ಇಂಟರ್‌ನಶಿಫ್ ಒಳಗೊಂಡಿದ್ದು, ಮೂರು ವರ್ಷದ ಓದಿನ ನಂತರ ಕೊನೆಯ ವರ್ಷ ಜಿಟಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ತುಮಕೂರಿನ ಹಿರೇಹಳ್ಳಿ, ಅಂತರಸನಹಳ್ಳಿ, ವಸಂತನರಸಾಪುರ ಮತ್ತು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಕಂಪನಿಗಳಲ್ಲಿ ಮಾಸಿಕ ೨೦ ಸಾವಿರ ರೂ. ಶಿಷ್ಯ ವೇತನದೊಂದಿಗೆ ಕೆಲಸ ಮಾಡಬಹುದು. ಇದುವರೆಗೂ ನಮ್ಮ ಸಂಸ್ಥೆಯಿಂದ ೨೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಪ್ಲೋಮೋ ಶಿಕ್ಷಣ ಪಡೆದು ಉದ್ಯೋಗ ಪಡೆದಿದ್ದಾರೆ. ಶೇ.೧೦೦ರಷ್ಟು ಉದ್ಯೋಗ ದೊರೆತಿದೆ. ಅಲ್ಲದೆ ಸ್ವಯಂ ಉದ್ಯೋಗ ಸಹ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಶೇ.೩೩ ಮೀಸಲಾತಿ ಇದೆ.ಎ ಐಸಿಟಿಇ ಅನುಮೋಧಿತ ಕೋರ್ಸುಗಳ ಕಲಿಕೆಯಿಂದ ದೇಶಾದ್ಯಂತ ಅಲ್ಲದೆ ವಿದೇಶದಲ್ಲಿಯೂ ಉದ್ಯೋಗ ಪಡೆಯುಬಹುದಾಗಿದೆ ಎಂದರು.
ಆಸಕ್ತ ವಿದ್ಯಾರ್ಥಿಗಳು.ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿಯ ಪ್ರಾಂಶುಪಾಲರಾದ ಅಶ್ವಿನ್ ಕುಮಾರ್ ಸೋಮಣ್ಣವರ್ (ಮೊ:೯೯೧೬೭೬೯೬೪೯-೮೯೫೧೯೮೮೯೩೦) ಸಂಪರ್ಕಿಸುವಂತೆ ಕೋರಿದರು.