ಜು. 1 ರಿಂದ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆಜನನ ಅಥವಾ ಮರಣ ನೋಂದಣಿಯ ಅಧಿಕಾರ
ಕಲಬುರಗಿ:ಜೂ.28:ರಾಜ್ಯದಲ್ಲಿ 2024ರ ಜುಲೈ 1 ರಿಂದ ಜಾರಿಗೆ ಬರುವಂತೆ ಜನನ ಅಥವಾ ಮರಣ ಸಂಭವಿಸಿದ 30 ದಿನದೊಳಗಾಗಿ ನೋಂದಣಿ ಮಾಡಿ ಪ್ರಮಾಣಪತ್ರ ವಿತರಣೆ ಮಾಡುವ ಅಧಿಕಾರವನ್ನು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ನೀಡಿ ಜನನ ಮರಣ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆಯನ್ನು ಹೊರಡಿಸಿದ್ದಾರೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುತ್ತೋಲೆಯನ್ವಯ, ಜನರು ತಮ್ಮ ಕುಟುಂಬದಲ್ಲಿ ಸಂಭವಿಸಿದ ಜನನ ಅಥವಾ ಮರಣದ 30 ದಿನಗಳ ಒಳಗಾಗಿ ತಮ್ಮ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳ ಮೂಲಕ ಪ್ರಕರಣವನ್ನು ನೋಂದಾಯಿಸಿ ಪ್ರಮಾಣ ಪತ್ರವನ್ನು ಪಡೆಯಬಹುದು.
ಜನನ ಮರಣ ಸಂಭವಿಸಿದ ಮೊದಲ 21 ಒಳಗಾಗಿ ನೋಂದಣಿ ಮಾಡಿಸಿ ಉಚಿತವಾಗಿ ಪ್ರಮಾಣ ಪತ್ರವನ್ನು ಪಡೆಯ ಬಹುದು. 21 ದಿನಗಳಿಂದ 30 ದಿನಗಳ ನಡುವೆ ನೋಂದಣಿ ಮಾಡಿಸಿದರೆ 2 ರೂ.ಗಳ ವಿಳಂಬ ಶುಲ್ಕ ನೀಡಿ ನೋಂದಣಿ ಮಾಡಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.