ವಾಡಿ: ಮನೆಗೆ ನುಗ್ಗಿದ ಚರಂಡಿನೀರು
ವಾಡಿ,ಸೆ 26: ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ಪುರಸಭೆ ವ್ಯಾಪ್ತಿಯ ವಾರ್ಡ ಸಂಖ್ಯೆ ಎರಡರಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಇಲ್ಲಿನ ನಾಗರಿಕರು ನಿದ್ದೆ ಇಲ್ಲದೆ ರಾತ್ರಿ ಕಳೆದಿದ್ದಾರೆ.
ಪ್ರತಿ ಮಳೆಗಾಲದಲ್ಲಿ ಇದೆ ಸಮಸ್ಯೆ ಇದೆ. ಆದರೆ ಪುರಸಭೆ ಅಧಿಕಾರಿಗಳು ಪೂರ್ವಯೋಜನೆ ಮಾಡುವುದಿಲ್ಲ. ಜನರ ಸಮಸ್ಯೆಗೆ ಸ್ಪಂದಿಸುವದಿಲ್ಲ. ಒಂದು ವಾರದಿಂದ ಮಳೆ ನೀರು ಮನೆಗಳ ಮುಂದೆ ನಿಂತಿದೆ. ಯಾವೊಬ್ಬ ಅಧಿಕಾರಿಗಳು ಬಂದು ಜನರ ಸಮಸ್ಯೆ ಕೇಳಿಲ್ಲ. ಪುರಸಭೆಯಲ್ಲಿ ನಾಲ್ಕು ಜನ ವಾರ್ಡ ಮೇಲ್ವಿಚಾರಕರು ಇದ್ದಾರೆ. ಜನರ ಸಮಸ್ಯೆ ಕೆಳುವವರೇ ಇಲ್ಲದಂತೆ ಆಗಿದೆ. ಕೊಳಚೆ ನೀರಿನಿಂದ ಜನರ ಆರೋಗ್ಯ ಹದಗೆಟ್ಟಿದೆ. ಆದರೆ ಇಲ್ಲಿ ಸ್ವಚ್ಛತೆ ಮಾಡಲು ಮುಂದಾಗುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಈಗಲಾದರೂ ಈ ಓಣಿಯ ಜನರ ಸಮಸ್ಯೆ ಯಾರು ಬಗೆಹರಿಸುತ್ತಾರೆ ಕಾದು ನೋಡಬೇಕು.